ಅಡಿಕೆಗೆ ಕೆಂಪು ಮೂತಿ ಹುಳು ಬಾಧೆ, ನಿರ್ವಹಣೆ ಮಾಡೋದು ಹೇಗೆ? ಸಂಶೋಧನಾ ಕೇಂದ್ರದಿಂದ ಮಾಹಿತಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಅಡಿಕೆಗೆ (Adike) ಕೆಂಪು ಮೂತಿ ಹುಳು ಬಾಧೆ ಶುರುವಾಗಿದೆ. ಸೊರಬ ಮತ್ತು ಸಾಗರ ಭಾಗದ ಅಡಿಕೆ ತೋಟಗಳಲ್ಲಿ ಇವು ಕಾಣಿಸುತ್ತಿವೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಇವುಗಳ ನಿರ್ವಹಣಾ ಕುರಿತು ಶಿವಮೊಗ್ಗದ ನವುಲೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವಪ್ಪರ್ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Arya-PU-College-Shimoga.

4 ರಿಂದ 5 ವರ್ಷದ ತೋಟದಲ್ಲಿ ಇದರ ಬಾಧೆ ಹೆಚ್ಚಾಗಿದೆ. ಗರಿಗಳು ಹಳದಿಯಾಗಿ ಬಾಡಿದಂತೆ ಕಾಣಿಸುತ್ತದೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ರಸ ಸೋರುತ್ತದೆ. ತೀವ್ರ ಹಾನಿಗೊಳಗಾದ ಮರಗಳಲ್ಲಿ ಕಾಂಡದ ಭಾಗದಲ್ಲಿ ನಾರಿನ ಅಂಶ ಹೊರಬರುತ್ತದೆ. ಹಾನಿಗೊಳಗಾದ ಮರಗಳನ್ನು ಸೀಳಿ ನೋಡಿದಾಗ ವಿವಿಧ ಹಂತದ ಹುಳುಗಳನ್ನು ಕಾಣಬಹುದು. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ತೀವ್ರಹಾನಿಗೊಳಗಾದ ಮರಗಳು ಗಾಳಿ, ಮಳೆಗೆ ಬೀಳುತ್ತವೆ ಎಂದು ಅವರು ತಿಳಿಸಿದ್ದಾರೆ.

ನಿರ್ವಹಣಾ ಕ್ರಮಗಳು

  • ಹುಳುವಿನ ಕಡೆ ಒಂದು ರಂಧ್ರವನ್ನು ಮಾಡಿ ಅದಕ್ಕೆ 4 ಮಿ.ಲೀ ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ ಅಥವಾ 4 ಮಿ.ಲೀ ಇಂಡಾಕ್ಸಾಕಾರ್ಬ 14.5 ಎಸ್.ಸಿ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸುರಿಯಬೇಕು.

kempu-muthi-hula-in-adike

  • ಸುಳಿಯಲ್ಲಿರುವ ರಂಧ್ರದಲ್ಲಿಯೂ ಕೂಡ ಇದನ್ನು ಸುರಿಯಬೇಕು.
  • ಶೇ.5ರ ಮೆಲಾಥಿಯಾನ್ ಪುಡಿ ಹಾಗೂ ಮರಳು ಸಮಪ್ರಮಾಣದಲ್ಲಿ ಬೆರೆಸಿ ಏಪ್ರಿಲ್ – ಮೇ ಹಾಗೂ ಸೆಪ್ಟೆಂಬರ್–ಅಕ್ಟೋಬರ್ ತಿಂಗಳುಗಳಲ್ಲಿ ಎಲೆಯ ಸಂದುಗಳಲ್ಲಿ ಹಾಕಬೇಕು.
  • ಯಾವುದೇ ಮರಗಳ ಕಾಂಡದಲ್ಲಿ ಗಾಯಗಳಾಗದಂತೆ ಎಚ್ಚರವಹಿಸಬೇಕು. ಗಾಯಗಳಾಗಿದ್ದಲ್ಲಿ 5.0 ಮಿ.ಲೀ ಕ್ಲೋರೋಫೈರಿಫಾಸ್ 20 ಇ.ಸಿ ಸಂದುಗಳಲ್ಲಿ ಹಾಕಿ ಮಣ್ಣಿನ ಮಿಶ್ರಣದಿಂದ ಮುಚ್ಚಬೇಕು.
  • ಕ್ಲೊರಾಂಟ್ರಿನಿಲಿಪ್ರೊಲ್ 18.5 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಅಥವಾ ಇಂಡಾಕ್ಸಾಕಾರ್ಬ 77.78 ಎಸ್.ಸಿ (2 ಮಿ.ಲೀ + 500 ಮಿ.ಲೀ ನೀರು) ಬೇರುಗಳ ಮುಖಾಂತರ ಕೊಡಬೇಕು.
  • ಪ್ರತಿ ಹೆಕ್ಟೇರ್‌ಗೆ ಒಂದರಂತೆ ಮೋಹಕ ಬಲೆಯನ್ನು ಇಡಬೇಕು ಮತ್ತು 6 ತಿಂಗಳಿಗೊಮ್ಮೆ ಲ್ಯೂರ್‌ನ್ನು ಬದಲಾಯಿಸಬೇಕು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಏಳು ದಿನದ ಗಡುವು, ತಪ್ಪಿದರೆ ನೀರಿನ ಸಂಪರ್ಕ ಕಡಿತದ ಎಚ್ಚರಿಕೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment