ಜಲಾಶಯ ಸುದ್ದಿ: ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಗಾಗಿ ಜಿಲ್ಲೆಯ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. (Dam Level)
ಯಾವ್ಯಾವ ಡ್ಯಾಮ್‌ಗೆ ಎಷ್ಟಿದೆ ಒಳಹರಿವು?
ಭದ್ರಾ ಜಲಾಶಯ: ಇವತ್ತು ಡ್ಯಾಮ್‌ಗೆ 9017 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ನೀರಿನ ಮಟ್ಟ 184.8 ಅಡಿಯಷ್ಟಿದೆ. ಒಟ್ಟು 6621 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಪೈಕಿ ಬಲದಂಡೆಗೆ 2650 ಕ್ಯೂಸೆಕ್, ಎಡದಂಡೆಗೆ 150 ಕ್ಯೂಸೆಕ್, ಮೇಲ್ದಂಡೆಗೆ 700 ಕ್ಯೂಸೆಕ್, ಕ್ರಸ್ಟ್ ಗೇಟ್ ಮೂಲಕ 401 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ.
ತುಂಗಾ ಜಲಾಶಯ: ಗಾಜನೂರಿನ ತುಂಗಾ ಡ್ಯಾಮ್ ಈಗಾಗಲೇ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಡ್ಯಾಮ್‌ಗೆ 7401 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೇ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಪೈಕಿ ನದಿಗೆ 5920 ಕ್ಯೂಸೆಕ್, ಮೇಲ್ದಂಡೆಗೆ 1154 ಕ್ಯೂಸೆಕ್, ಎಡದಂಡೆ ನಾಲೆಗೆ 192 ಕ್ಯೂಸೆಕ್, ಬಲದಂಡೆಗೆ 100 ಕ್ಯೂಸೆಕ್ ಹರಿಸಲಾಗುತ್ತಿದೆ.

ಲಿಂಗನಮಕ್ಕಿ ಡ್ಯಾಮ್: ಇವತ್ತು 6,290 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯ ಶೇ.97.08ರಷ್ಟು ಭರ್ತಿಯಾಗಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.05 ಅಡಿಯಷ್ಟು ಏರಿಕೆಯಾಗಿದೆ. ಸದ್ಯ ನೀರಿನ ಮಟ್ಟ 1817.70 ಅಡಿಯಷ್ಟಿದೆ. ಒಟ್ಟು 8587 ಕ್ಯೂಸಕ್ ಹೊರ ಹರಿವು ಇದೆ.
ಇದನ್ನೂ ಓದಿ » ಭಾರತೀಯ ಸೇನೆ, ಯುನಿಫಾರ್ಮ್ ಸೇವೆಗೆ ಸೇರ ಬಯಸುವವರಿಗೆ ಉಚಿತ ತರಬೇತಿ, ಅರ್ಜಿ ಆಹ್ವಾನ
Dam Level

