ಶಿವಮೊಗ್ಗಕ್ಕೆ ನಾಳೆ ಜೆಸಿಐ ರಾಷ್ಟ್ರೀಯ ಅಧ್ಯಕ್ಷರ ಭೇಟಿ, ಏನೆಲ್ಲ ಕಾರ್ಯಕ್ರಮಲ್ಲಿ ಭಾಗಿಯಾಗ್ತಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ (National President) ಅಂಕುರ್ ಜುಂಜುನ್‌ವಾಲಾ ಅವರು ಜು.23ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜೆಸಿಐ ಜಿಲ್ಲಾಧ್ಯಕ್ಷ ಜಿ. ಗಣೇಶ್ ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಅಧಿಕಾರಿಗಳಿಂದಲೇ ಕಡತಗಳಿಗೆ ಬೆಂಕಿ ಆರೋಪ, ಕಚೇರಿ ಮುಂದೆ ದಿಢೀರ್‌ ಹೋರಾಟ

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸರ್ಕಾರಿ ನೌಕರರ ಭವನದವರೆಗೆ ಕಾರ್ ಮತ್ತು ಬೈಕ್ ರ್‍ಯಾಲಿ ಮೂಲಕ ಅಂಕುರ್ ಜುಂಜುನ್‌ವಾಲಾ ಅವರನ್ನು ಕರೆತರಲಾಗುವುದು ಎಂದು ತಿಳಿಸಿದರು.

ಏನೆಲ್ಲ ಕಾರ್ಯಕ್ರಮ ಇರಲಿದೆ?

  • ಜೆಸಿಐ ಶಿವಮೊಗ್ಗ ರಾಯಲ್ಸ್ ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಸ್ವಾಗತ ಫಲಕ ಅನಾವರಣ.
  • ಜೆಸಿಐ ಸಮೃದ್ಧಿಯಿಂದ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಕೊಡುಗೆ.

JCI-press-meet-in-Shivamogga National President visit

  • ಅಂಕುರ್ ಜುಂಜುನ್‌ವಾಲಾ ಅವರನ್ನು ಕರೆತರುವ ಮಾರ್ಗ ಮಧ್ಯೆ ಸಹ್ಯಾದ್ರಿ ಕಾಲೇಜಿನ ಸಹಯೋಗದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ದಿನ ಆಚರಣೆ.
  • ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲೆಯ ಎಲ್ಲ ಜೆಸಿಐ ಘಟಕಗಳ ಅಧ್ಯಕ್ಷರೊಂದಿಗೆ ಸಭೆ. ಈ ಸಭೆಯಲ್ಲಿ ವಲಯ 24ರ ಅಧ್ಯಕ್ಷ ಸಿ.ಎ. ಗೌರೀಶ್ ಭಾರ್ಗವ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಲಯ 24ರ ಪದಾಧಿಕಾರಿಗಳು, ಸುದರ್ಶನ್ ತಾಯಿ ಮನೆ, ಜಿಲ್ಲೆಯ ಎಲ್ಲ ಘಟಕಗಳ ಅಧ್ಯಕ್ಷರು ಉಪಸ್ಥಿರಿರಲಿದ್ದಾರೆ ಎಂದರು.

June-2025-Report-Shivamogga-Live-New-New.

ಸುದ್ದಿಗೋಷ್ಠಿಯಲ್ಲಿ ರೇಖಾ ರಂಗನಾಥ್, ಎಸ್. ಎಂ. ಸ್ವಾತಿ, ಶಿಲ್ಪಾ ಸತೀಶ್, ವಿಜಯಕುಮಾರ್, ನಿವೇದಿತಾ ವಿಕಾಸ್, ಸ್ಮಿತಾ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment