ಶಿವಮೊಗ್ಗದಲ್ಲಿ ಅಧಿಕಾರಿಗಳಿಂದಲೇ ಕಡತಗಳಿಗೆ ಬೆಂಕಿ ಆರೋಪ, ಕಚೇರಿ ಮುಂದೆ ದಿಢೀರ್‌ ಹೋರಾಟ

ಶಿವಮೊಗ್ಗ: ಸರ್ಕಾರಿ ಅಧಿಕಾರಿಗಳು ಗಾಡಿಕೊಪ್ಪದ ಖಾಲಿ ಜಾಗದಲ್ಲಿ ಹಲವು ಕಡತಗಳಿಗೆ (Files) ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ದಿಢೀರ್‌ ಪ್ರತಿಭಟನೆ ನಡೆಸಿದರು.  

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇದನ್ನೂ ಓದಿ » ಸಿಗಂದೂರು ದೇಗುಲಕ್ಕೆ ಸಾವಿರ ಸಾವಿರ ಭಕ್ತರು, ಪಾರ್ಕಿಂಗ್‌ಗು ಸಿಗದ ಜಾಗ, ಸೇತುವೆ ಮೇಲೆ ಸೆಲ್ಫಿ ಸಂಭ್ರಮ

ವಿನೋಬನಗರ ಪೊಲೀಸ್ ಚೌಕಿ ಸಮೀಪದ ಸೂಡಾ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

Nanjappa Hospital Advertisement

Protest-Against-Labour-Department for destroying files

ಗಾಡಿಕೊಪ್ಪದಲ್ಲಿ ಕಡತ ಸುಟ್ಟರು’

ಕಾರ್ಮಿಕ ಇಲಾಖೆ ಅಧಿಕಾರಿಗಳು ಗಾಡಿಕೊಪ್ಪದಲ್ಲಿ ಇಂದು ಮಧ್ಯಾಹ್ನ ಹಲವು ಕಡತಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಕಡತಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕು, ಸುಡಲು ಕಾರಣವೇನು ಎಂದು ತಿಳಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳು ಭಾನುವಾರವು ಕೆಲಸ ಮಾಡುತ್ತಿದ್ದಾರೆ. ಗೂಡ್ಸ್‌ ವಾಹನಗಳಲ್ಲಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಈಗ ಕೇಳಿದರೆ ವೇಸ್ಟ್‌ ಪೇಪರ್‌ ಎಂದು ಹೇಳುತ್ತಿದ್ದಾರೆ. ಇದರ ಕುರಿತು ಸೂಕ್ತ ದಾಖಲೆ ನೀಡಬೇಕು.ರಾಜಶೇಖರ್‌, ಪ್ರತಿಭಟನಾಕಾರ

Protest-Against-Labour-Department for destroying files

ಅಧಿಕಾರಿಗಳು ಹೇಳೋದೇನು?

ಇನ್ನು, ಕಾರ್ಮಿಕ ಇಲಾಖೆ ಅಧಿಕಾರಿಗಳು ತಾವು ವೇಸ್ಟ್‌ ಪೇಪರ್‌ಗಳನ್ನು ಮಾತ್ರ ಸುಟ್ಟಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್‌, ಕಚೇರಿಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ದಾಖಲೆಗಳನ್ನು ಸರಿಯಾಗಿ ಜೋಡಿಸಬೇಕಿತ್ತು. ಕಡತಗಳನ್ನು ಪರಿಶೀಲಿಸಿ ಜೋಡಿಸುವಾಗ ಒಂದಷ್ಟು ವೇಸ್ಟ್‌ ಪೇಪರ್‌ಗಳು ಸಿಕ್ಕಿದ್ದವು ಎಂದು ಸ್ಪಷ್ಟಪಡಿಸಿದರು.  

Protest-Against-Labour-Department for destroying files

ನಾವು ಯಾವುದೇ ದಾಖಲೆಗಳನ್ನು ಸುಟ್ಟಿಲ್ಲ. ಕಳೆದ ಐದು ವರ್ಷದಿಂದ ನಮ್ಮೆಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಹಳೆ ದಾಖಲೆಗಳು ಸರಿಯಾಗಿ ಜೋಡಿಸುವಾಗ ಕೆಲವು ವೇಸ್ಟ್‌ ಪೇಪರ್‌ಗಳನ್ನು ಮಾತ್ರ ತೆಗೆದು ಸುಟ್ಟಿದ್ದೇವೆ. ಈ ವಿಲೇವಾರಿಗೆ ಸಂಬಂಧಿಸಿದಂತೆ ಕಚೇರಿ ಆದೇಶ ಮಾಡಿಕೊಂಡಿದ್ದೇವೆ.ವೇಣುಗೋಪಾಲ್‌, ಜಿಲ್ಲಾ ಕಾರ್ಮಿಕ ಅಧಿಕಾರಿ

ದಾಖಲೆಗಾಗಿ ಪಟ್ಟು ಹಿಡಿದು ಕುಳಿತಿದ್ದ ಪ್ರತಿಭಟನಾಕಾರರನ್ನು ವಿನೋಬನಗರ ಠಾಣೆ ಪೊಲೀಸರು ಸಮಾಧಾನಪಡಿಸಿದರು. ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

June-2025-Report-Shivamogga-Live-New-New.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment