ರವೀಂದ್ರನಗರ ಗಣಪತಿ ದೇಗುಲದ ಮುಂಭಾಗ ನಾಗದೇವರ ಪ್ರತಿಷ್ಠಾಪನೆ

ಶಿವಮೊಗ್ಗ: ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಿರ್ಮಿಸಲಾಗಿರುವ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ಜುಲೈ 13ರಂದು ಬೆಳಿಗ್ಗೆ 8.30ಕ್ಕೆ ‘ನಾಗದೇವರ ಪುನರ್ ಪ್ರತಿಷ್ಠಾಪನಾ’ ಹಮ್ಮಿಕೊಳ್ಳಲಾಗಿದೆ. ರವೀಂದ್ರನಗರ ಮುಖ್ಯ ರಸ್ತೆಯ ಗಣಪತಿ ದೇವಸ್ಥಾನ (temple) ಮುಂಭಾಗದಲ್ಲಿ ಸಮಾರಂಭ ನಡೆಯಲಿದೆ. 

ನಾಗಪ್ರತಿಷ್ಠಾಂಗ ಹೋಮ, ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ದತ್ತಿಯ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಎನ್.ಉಮಾಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳಿಗೆ ಎಷ್ಟಿದೆ ಒಳ ಹರಿವು?

June-2025-Report-Shivamogga-Live

Shimoga-News-update

Leave a Comment