ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಗರದ ವಿವಿಧೆಡೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಬು ಅಂಜನಪ್ಪ, ಎಂ.ಸುರೇಶ್ ಹಾಗೂ ಸಿಬ್ಬಂದಿ ಕಾಲ್ನಡಿಗೆ ಗಸ್ತು ಮಾಡಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಲ್ಲೆಲ್ಲಿ ಗಸ್ತು ಮಾಡಿದರು?
ಅಮೀರ್ ಅಹಮದ್ ಸರ್ಕಲ್, ಓ.ಟಿ.ರಸ್ತೆ, ವಿಜಯ ಗ್ಯಾರೇಜ್, ಟೆಂಪೋ ಸ್ಟ್ಯಾಂಡ್ ಮುಂತಾದ ಭಾಗಗಳಲ್ಲಿ ಕಾಲ್ನಡಿಗೆ ಗಸ್ತು ನಡೆಸಿದರು. ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ ಮೂವರು ಸಂಚರಿಸುವುದು, ಅವ್ಯವಸ್ಥಿತವಾಗಿ ರಸ್ತೆ ಪಕ್ಕದಲ್ಲಿ ವಾಹನ ನಿಲುಗಡೆ ಮಾಡಿದರೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವಂತೆ ಈ ಸಂದರ್ಭ ಸಾರ್ವಜನಿಕರಿಗೆ ತಿಳಿಸಿದರು.
ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಕೆ, ಆಟೋ ಸ್ಟ್ಯಾಂಡ್‌ಗಳಲ್ಲಿ ಆಟೋಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಯಿತು. ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸಬೇಕಿದ್ದ ಆಟೋವೊಂದು ಈ ಸಂದರ್ಭದಲ್ಲಿ ಪತ್ತೆಯಾಯಿತು. ಶೀಘ್ರದಲ್ಲೇ ದಂಡ ಪಾವತಿಸುವಂತೆ ಆಟೋ ಚಾಲಕನಿಗೆ ಸೂಚನೆ ನೀಡಲಾಯಿತು.
ಜಿಲ್ಲೆಯಾದ್ಯಂತ ಪೊಲೀಸರ ಗಸ್ತು
ಇನ್ನೊಂದೆಡೆ ಜಿಲ್ಲೆಯಾದ್ಯಂತ ಪೊಲೀಸರು ರಾತ್ರಿ ಕಾಲ್ನಡಿಗೆ ಗಸ್ತು ಮಾಡಿದರು. 19 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಶಿವಮೊಗ್ಗದ ಎಂಕೆಕೆ ರಸ್ತೆ, ಬರ್ಮಪ್ಪ ನಗರ, ಮೆಹಬೂಬ್ ಗಲ್ಲಿ, ಟಿಪ್ಪು ನಗರ, ಎಎ ಕಾಲೋನಿ, ಬೊಮ್ಮನಕಟ್ಟೆ, ಪುರ್ಲೆ, ಆಯನೂರು, ಭದ್ರಾವತಿಯ ಕೂಲಿ ಬ್ಲಾಕ್ ಶೆಡ್, ಸೀಗೆ ಬಾಗಿ, ಹನುಮಂತ ನಗರ, ಬಾರಂದೂರು, ದೊನಭಘಟ್ಟ, ಜಂಭರಘಟ್ಟ, ಶಿಕಾರಿಪುರದ ದೊಡ್ಡಪೇಟೆ, ಶಿರಾಳಕೊಪ್ಪದ ಕುರುಬರ ಕೇರಿ, ಆನವಟ್ಟಿಯ ವೈಎಂಜಿ ವೃತ್ತ, ಆಜಾದ್ ನಗರ, ಪ್ರಗತಿ ವೃತ್ತ, ಸಾಗರದ ಅರಳೆಕೊಪ್ಪ, ಸೊರಬ ರಸ್ತೆ, ಆನಂದಪುರದ ಮಾರಿಕಾಂಬ ದೇವಸ್ಥಾನ ರಸ್ತೆ ಮತ್ತು ತೀರ್ಥಹಳ್ಳಿಯ ಸೀಬಿನ ಕೆರೆ, ಬೈಸೆ, ಬಿದರಗೋಡು, ಬೆಜ್ಜವಳ್ಳಿಯಲ್ಲಿ ಗಸ್ತು ನಡೆಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೌದಿ ಅರೇಬಿಯಾ ಕರೆನ್ಸಿ ಸಹಿತ ಆರೋಪಿ ಅರೆಸ್ಟ್, ಚಿನ್ನಾಭರಣ ಕದ್ದು ಗಿರವಿ ಇಟ್ಟಿದ್ದ ಕಳ್ಳ