ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತೂ ಮಳೆ ಮುಂದುವರೆದಿದೆ. ಕೆಲವು ಕಡೆ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದೆ.
ಸಿಟಿಯಲ್ಲಿ ಮೋಡ ಕವಿದ ವಾತಾವರಣ
ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಕೆಲವು ಕ್ಷಣ ಬಿಸಿಲು ಪ್ರತ್ಯಕ್ಷವಾಗುತ್ತಿತ್ತು. ಸಂಜೆ ವೇಳೆ ಮಳೆ ಆರಂಭವಾಗಿದೆ. ಜನ ಜೀವನಕ್ಕೆ ತೊಂದರೆ ಉಂಟಾಗಿದೆ.
ಮಧ್ಯಾಹ್ನದಿಂದಲೇ ಮಳೆ ಶುರು
ಜಿಲ್ಲೆಯ ವಿವಿಧೆಡೆ ಮಧ್ಯಾಹ್ನದಿಂದ ಮಳೆ ಆರಂಭವಾಗಿದೆ. ಚರಂಡಿಗಳು, ಹಳ್ಳಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾಹನ ಸವಾರರಿಗೆ ಇದು ಸಮಸ್ಯೆ ಉಂಟು ಮಾಡಿದೆ.
ಮದುವೆ ಮನೆ ಸಂಭ್ರಮಕ್ಕೆ ಅಡ್ಡಿ
ಶಿಕಾರಿಪುರದ ಶೀರಿಹಳ್ಳಿ ತಾಂಡದಲ್ಲಿ ಹಾಲೇಶ್, ನಿರ್ಮಲಾ ಅವರ ಮದುವೆ ಸಮಾರಂಭಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ಅಡುಗೆ ಮಾಡುತ್ತಿದ್ದಾಗ ಮಳೆಯಾಗಿದ್ದು, ದಿನಸಿ ವಸ್ತುಗಳು ಮಳೆ ನೀರಿನಿಂದ ಹಾನಿಯಾಗಿದೆ.
ರಸ್ತೆ ಮೇಲೆ ನೀರೋ ನೀರು
ಸಾಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿ.ಹೆಚ್.ರಸ್ತೆಯ ಶೋ ರೂಂ ಒಂದ ಮುಂದೆ ಚರಂಡಿ ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತಿದೆ.
ಬೆಳ ಹಾನಿ, ರೈತರಿಗೆ ಆತಂಕ
ಅಕಾಲಿಕೆ ಮಳೆ ರೈತರಿಗೆ ತೀವ್ರ ಸಮಸ್ಯೆ ಉಂಟು ಮಾಡಿದೆ. ಕೊಯ್ಲಿಗೆ ಕಾದಿದ್ದ ಭತ್ತದ ಬೆಳೆ ಹಾನಿಯಾದ ವರದಿಯಾಗಿದೆ. ಹತ್ತಿ ಬಿಡಿಸಲು ಕೂಡ ಸಮಸ್ಯೆಯಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]