ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 25 JULY 2023
SHIMOGA : ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೆ ಮಳೆ ಬಿರುಸಾಗಿದೆ. ಇನ್ನೊಂದೆಡೆ ಮೂರ್ನಾಲ್ಕು ದಿನದಲ್ಲಿ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ (Rainfall) ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ ಮುಂದುವರೆದಿದೆ. ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಲವೆಡೆ ಆಗಾಗ ಸ್ವಲ್ಪ ಬಿಡುವು ನೀಡಿ ಬಳಿಕ ಮಳೆ ಅಬ್ಬರಿಸುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಲ್ಲೆಲ್ಲಿ ಮಳೆ ಹೇಗಿದೆ?
ತೀರ್ಥಹಳ್ಳಿಯ ಹೊನ್ನೇತಾಳು, ಬಿದರಗೋಡು, ಅರೇಹಳ್ಳಿ, ತೀರ್ಥಮತ್ತೂರು, ಸಾಲ್ಗುಡಿ, ಹೊಸಹಳ್ಳಿ, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಹಾದಿಗಲ್ಲು, ಆರಗ, ಹೊಸನಗರದ ಸುಳಗೋಡು, ಸೋನಲೆ, ತ್ರಿಣಿವೆ, ನಗರ, ಮಾರುತಿಪುರ, ಬಾಳೂರು, ಸಾಗರದ ಭೀಮನಕೋಣೆ, ಭೀಮನೇರಿ, ಸಿರಿವಂತೆ, ಸೊರಬದ ಮುಟುಗುಪ್ಪೆ ಭಾಗದಲ್ಲಿ ಮಳೆ (Rainfall) ಜೋರಿದೆ.
ಉಳಿದಂತೆ ಶಿವಮೊಗ್ಗ, ಸಾಗರ, ಸೊರಬ, ಹೊಸನಗರದ ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ. ಭದ್ರಾವತಿ ತಾಲೂಕಿನಲ್ಲಿ ಆಗಾಗ ಸ್ವಲ್ಪ ಬಿಡುವು ನೀಡಿ ಬಳಿಕ ಮಳೆ ಅಬ್ಬರಿಸುತ್ತಿದೆ.
ಇದನ್ನೂ ಓದಿ – ಭದ್ರ ಜಲಾಶಯಕ್ಕೆ ಇವತ್ತು ಒಳ ಹರಿವು ಎಷ್ಟಿದೆ? ನೀರಿನ ಸಂಗ್ರಹ ಎಷ್ಟು ಅಡಿಗೆ ತಲುಪಿದೆ?
ಮೂರ್ನಾಲ್ಕು ದಿನ ಭಾರಿ ಮಳೆ
ಆಂಧ್ರ ಪ್ರದೇಶದ ಉತ್ತರ ಭಾಗ ಮತ್ತು ಒಡಿಶಾ ರಾಜ್ಯದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ರಾಜ್ಯದ ವಿವಿಧೆಡೆ ಮುಂಗಾರು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದರ ಪರಿಣಾಮ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡು ಭಾಗದಲ್ಲಿ ಇನ್ನು ಮೂರ್ನಾಲ್ಕು ದಿನ ಜೋರು ಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ – ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 3.70 ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?
ಜು.26 ರಿಂದ 28ರವರೆಗೆ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ತೀಕ್ಷ್ಣ ವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ – ತುಂಗಾ ಜಲಾಶಯದ ಒಳ ಹರಿವು ಹೆಚ್ಚಳ, ಇವತ್ತು ಎಷ್ಟಿದೆ ಹೊರ ಹರಿವು?