ಶಿವಮೊಗ್ಗ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಭಾರಿ ಮಳೆ, ಇಲ್ಲಿದೆ ಮಳೆಯಾದ ಟಾಪ್‌ ಊರುಗಳ ಪಟ್ಟಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಮಳೆ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಪುನರ್ವಸು ಮಳೆ ಬಿರುಸು ಪಡೆದುಕೊಂಡಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ವಿವಿಧೆಡೆ ಜೋರು ಮಳೆಯಾಗುತ್ತಿದೆ. ಜುಲೈ  6ರ ಬೆಳಗ್ಗೆ 8:30 ರಿಂದ ಜುಲೈ 7ರ ಬೆಳಗ್ಗೆ 8:30ರವರೆಗೆ ಜಿಲ್ಲೆಯ ಹಲವು ಹೋಬಳಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ನೂರು ಮಿಲಿ ಮೀಟರ್‌ಗಿಂತಲು ಹೆಚ್ಚು ಮಳೆಯಾಗಿದೆ. ➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಇಲ್ಲಿದೆ ತಾಲೂಕುವಾರು ರಿಪೋರ್ಟ್

ತೀರ್ಥಹಳ್ಳಿ ತಾಲೂಕು‌

ತೀರ್ಥಹಳ್ಳಿ ತಾಲೂಕಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲೇ ಗರಿಷ್ಠ ಮಳೆ ದಾಖಲಾಗಿದೆ. ಹೊನ್ನೆತಾಳು ಭಾಗದಲ್ಲಿ ಬರೋಬ್ಬರಿ 178.5 ಮಿ.ಮೀ ಮಳೆಯಾಗಿದ್ದರೆ, ಹೊಸಹಳ್ಳಿಯಲ್ಲಿ 129.5 ಮಿ.ಮೀ, ತ್ರಯಂಬಕಪುರದಲ್ಲಿ 127.5 ಮಿ.ಮೀ ಹಾಗೂ ಆಗುಂಬೆಯಲ್ಲಿ 125.8 ಮಿ.ಮೀ ಮಳೆ ಸುರಿದಿದೆ. ಇನ್ನುಳಿದಂತೆ ಬಿದರಗೋಡಿನಲ್ಲಿ 95 ಮಿ.ಮೀ, ಮೇಗರವಳ್ಳಿಯಲ್ಲಿ 78.5 ಮಿ.ಮೀ, ಸಾಲಗಡಿಯಲ್ಲಿ 77.5 ಮಿ.ಮೀ, ಹೆಗ್ಗೋಡಿನಲ್ಲಿ 74 ಮಿ.ಮೀ, ಹದಿಗಲ್ಲಿನಲ್ಲಿ 69.0 ಮಿ.ಮೀ, ಭಾಂಡ್ಯ-ಕುಕ್ಕೆಯಲ್ಲಿ 67 ಮಿ.ಮೀ, ದೇಮ್ಲಾಪುರದಲ್ಲಿ 53.5 ಮಿ.ಮೀ, ಬೆಜ್ಜವಳ್ಳಿಯಲ್ಲಿ 50 ಮಿ.ಮೀ ಹಾಗೂ ತೀರ್ಥಹಳ್ಳಿ ನಗರ ವ್ಯಾಪ್ತಿಯಲ್ಲಿ 40.7 ಮಿ.ಮೀ ನಷ್ಟು ವ್ಯಾಪಕ ಮಳೆ ದಾಖಲಾಗಿದೆ.

People-hold-and-walks-in-Rain-at-Shimoga

ಸಾಗರ ತಾಲೂಕು

ಸಾಗರ ತಾಲೂಕಿನ ಕಂಡಿಕಾ ಭಾಗದಲ್ಲಿ 170.5 ಮಿ.ಮೀ ನಷ್ಟು ಮಳೆ ಸುರಿದರೆ, ಸಾಗರ ನಗರ ವ್ಯಾಪ್ತಿಯಲ್ಲಿ 80.4 ಮಿ.ಮೀ ಮಳೆಯಾಗಿದೆ. ಇದರೊಂದಿಗೆ ಕೋಳೂರು 65.5 ಮಿ.ಮೀ, ಭೀಮನೇರಿ 65.0 ಮಿ.ಮೀ, ಕಲ್ಮನೆ 60.5 ಮಿ.ಮೀ, ಭೀಮನಕೋಣೆ 47.0 ಮಿ.ಮೀ, ತ್ಯಾಗರ್ತಿ 44.0 ಮಿ.ಮೀ, ಮಾಳ್ವೆ 39.5 ಮಿ.ಮೀ, ಹಿರೇಬಿಲಗುಂಜಿ 37.0 ಮಿ.ಮೀ, ಕೆಳದಿ 34.0 ಮಿ.ಮೀ, ಸೈದೂರು 21.0 ಮಿ.ಮೀ ಮತ್ತು ಹೀರೆನೆಲ್ಲೂರು ಭಾಗದಲ್ಲಿ 20.5 ಮಿ.ಮೀ ಮಳೆ ವರದಿಯಾಗಿದೆ.

ಹೊಸನಗರ ತಾಲೂಕು

ಹೊಸನಗರ ತಾಲೂಕಿನ ಮಾಸ್ತಿಗಟ್ಟೆಯಲ್ಲಿ 128 ಮಿ.ಮೀ ಮಳೆಯಾಗಿದ್ದರೆ, ಕೋಡೂರಿನಲ್ಲಿ 109.5 ಮಿ.ಮೀ ಮತ್ತು ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ 98.2 ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆ ಮೇಲಿನಬೆಸಿಗೆಯಲ್ಲಿ 47.5 ಮಿ.ಮೀ, ಮಾರುತಿಪುರದಲ್ಲಿ 34.5 ಮಿ.ಮೀ, ಅರಸಾಳಿನಲ್ಲಿ 28 ಮಿ.ಮೀ ಹಾಗೂ ಬಾಳೂರು ಭಾಗದಲ್ಲಿ 21.5 ಮಿ.ಮೀ ಮಳೆಯಾಗಿದೆ.

ಸೊರಬ ತಾಲೂಕು

ಸೊರಬ ತಾಲೂಕಿನ ಹೊಸಬಾಳೆಯಲ್ಲಿ 58 ಮಿ.ಮೀ ಮತ್ತು ಹೆಚ್ಚೆ ಭಾಗದಲ್ಲಿ 44.5 ಮಿ.ಮೀ ಮಳೆ ಬಿದ್ದಿದೆ. ತಾಲೂಕಿನ ಇನ್ನುಳಿದ ಭಾಗಗಳಾದ ಹಳೇಸೊರಬದಲ್ಲಿ 29 ಮಿ.ಮೀ, ಶಕುನವಳ್ಳಿಯಲ್ಲಿ 28.5 ಮಿ.ಮೀ, ನ್ಯಾರ್ಸಿಯಲ್ಲಿ 25 ಮಿ.ಮೀ, ಗುಡುವಿಯಲ್ಲಿ 24.5 ಮಿ.ಮೀ, ಉಳವಿಯಲ್ಲಿ 21.2 ಮಿ.ಮೀ, ಅಗಸನಹಳ್ಳಿ ಮತ್ತು ಇಂಡುವಳ್ಳಿಯಲ್ಲಿ ತಲಾ 16 ಮಿ.ಮೀ, ಮೂಡಿ-ದೊಡ್ಡಿಕೊಪ್ಪದಲ್ಲಿ 15.5 ಮಿ.ಮೀ, ದ್ಯಾವನಹಳ್ಳಿಯಲ್ಲಿ 12 ಮಿ.ಮೀ ಹಾಗೂ ತತ್ತೂರು ಭಾಗದಲ್ಲಿ 5.5 ಮಿ.ಮೀ ಮಳೆ ದಾಖಲಾಗಿದೆ.

ಶಿಕಾರಿಪುರ ತಾಲೂಕು

ಶಿಕಾರಿಪುರ ತಾಲೂಕಿನ ಮುಡುಬಸಿದ್ದಾಪುರದಲ್ಲಿ 31 ಮಿ.ಮೀ, ಬಳ್ಳಿಗಾವಿಯಲ್ಲಿ 29 ಮಿ.ಮೀ ಮತ್ತು ಹಾರಗಿಯಲ್ಲಿ 23.5 ಮಿ.ಮೀ ಮಳೆಯಾಗಿದೆ. ಉಳಿದಂತೆ ಜಕ್ಕನಹಳ್ಳಿಯಲ್ಲಿ 21 ಮಿ.ಮೀ, ಈಸೂರಿನಲ್ಲಿ 16 ಮಿ.ಮೀ, ತಾಳಗುಂದದಲ್ಲಿ 15 ಮಿ.ಮೀ, ಚುರ್ಚುಗುಂಡಿಯಲ್ಲಿ 14.5 ಮಿ.ಮೀ, ಅಂಬಾರಗೊಪ್ಪದಲ್ಲಿ 12 ಮಿ.ಮೀ, ಇನಾಂ ಅಗ್ರಹಾರ ಮುಚಡಿಯಲ್ಲಿ 11.5 ಮಿ.ಮೀ, ಬಗನಕಟ್ಟೆಯಲ್ಲಿ 10.5 ಮಿ.ಮೀ, ಮುದ್ದನಹಳ್ಳಿಯಲ್ಲಿ 10 ಮಿ.ಮೀ ಹಾಗೂ ಹೇರೇಜಂಬೂರು ಭಾಗದಲ್ಲಿ 7.5 ಮಿ.ಮೀ ಮಳೆ ಸುರಿದಿದೆ.

ಶಿವಮೊಗ್ಗ ತಾಲೂಕು

ಶಿವಮೊಗ್ಗ ನಗರ ಭಾಗದಲ್ಲಿ 25.2 ಮಿ.ಮೀ, ಹಡೋನಹಳ್ಳಿಯಲ್ಲಿ 22 ಮಿ.ಮೀ ಹಾಗೂ ಸಂತೆಕಡೂರಿನಲ್ಲಿ 16.5 ಮಿ.ಮೀ ಮಳೆಯಾಗಿದೆ. ಉಳಿದಂತೆ ಕುಂಚೇನಹಳ್ಳಿಯಲ್ಲಿ 14.5 ಮಿ.ಮೀ, ಕೊನಗವಳ್ಳಿಯಲ್ಲಿ 11.5 ಮಿ.ಮೀ, ರಾಮನಗರದಲ್ಲಿ 7.5 ಮಿ.ಮೀ, ಅಬ್ಬಲಗೆರೆಯಲ್ಲಿ 6 ಮಿ.ಮೀ ಮಳೆಯಾಗಿದೆ.

ಭದ್ರಾವತಿ ತಾಲೂಕು

ಭದ್ರಾವತಿ ತಾಲೂಕಿನ ಹಿರಿಯೂರು ಭಾಗದಲ್ಲಿ 32.5 ಮಿ.ಮೀ, ಮೈದೊಳಲು 26 ಮಿ.ಮೀ, ಮಂಗೋಟೆಯಲ್ಲಿ 25 ಮಿ.ಮೀ ಹಾಗೂ ದಾಸರಕಲ್ಲಹಳ್ಳಿಯಲ್ಲಿ 25 ಮಿ.ಮೀ ಮಳೆಯಾಗಿದೆ. ಇನ್ನುಳಿದಂತೆ ಅರಳಿಕೊಪ್ಪದಲ್ಲಿ 20 ಮಿ.ಮೀ, ಮಾವಿನಕೆರೆಯಲ್ಲಿ 15 ಮಿ.ಮೀ, ಕೋಮಾರನಹಳ್ಳಿಯಲ್ಲಿ 12.5 ಮಿ.ಮೀ, ನಾಗತಿಬೆಳಗಲಿನಲ್ಲಿ 12 ಮಿ.ಮೀ, ಅರಳಹಳ್ಳಿಯಲ್ಲಿ 10.5 ಮಿ.ಮೀ, ಬಿಳಕಿಯಲ್ಲಿ 9 ಮಿ.ಮೀ, ಗುಡುಮಘಟ್ಟ 2.5 ಮಿ.ಮೀ, ನಿಂಬೆಗೊಂದಿಯಲ್ಲಿ 1.5 ಮಿ.ಮೀ ಹಾಗೂ ಭದ್ರಾವತಿ ಟೌನ್ ಭಾಗದಲ್ಲಿ 0.8 ಮಿ.ಮೀ ನಷ್ಟು ಅಲ್ಪ ಮಳೆಯಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!