ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021
ಕರೋನ ಆತಂಕದ ನಡುವೆ, ಹೋಳಿ ಹುಣ್ಣಿಮೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಬಣ್ಣದ ಆಟ ಶುರುವಾಗಿದೆ. ವಿವಿಧ ಬಡಾವಣೆಗಳಲ್ಲಿ ಮಕ್ಕಳು ಬಣ್ಣ ಎರಚಿ ಸಂಭ್ರಮ ಪಡುತ್ತಿದ್ದಾರೆ
ಶಿವಮೊಗ್ಗ ನಗರದ ವಿವಿಧೆಡೆ ಮಕ್ಕಳು ಹೋಳಿ ಹಬ್ಬ ಆಚರಿಸುತ್ತಿದ್ದಾರೆ. ಬಣ್ಣ ಹಚ್ಚಿಕೊಂಡು, ಮನೆ ಮನೆಗೂ ತೆರಳುತ್ತಿದ್ದಾರೆ. ಸ್ನೇಹಿತರಿಗೆ ಬಣ್ಣ ಹಚ್ಚಿ ಖುಷಿ ಪಡುತ್ತಿದ್ದಾರೆ.
ಮನ್ಮಥ ಮೂರ್ತಿ ಪ್ರತಿಷ್ಠಾಪನೆ
ಮತ್ತೊಂದೆಡೆ ಜಿಲ್ಲೆಯ ವಿವಿಧೆಡೆ ಮನ್ಮಥನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಭದ್ರಾವತಿಯ ಕುಂಬಾರ ಬೀದಿಯಲ್ಲಿ ರತಿ ಸಹಿತ ಮನ್ಮಥನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಕಾಮಣ್ಣನನ್ನು ಹೊತ್ತು, ಮನೆ ಮನೆಗೆ ತೆರಳುತ್ತಿರುವ ಮಕ್ಕಳು, ಹಣ, ಕಟ್ಟಿಗೆ, ಭರಣಿ ಸಂಗ್ರಹಿಸುತ್ತಿದ್ದಾರೆ. ಊರಿನ ಹೊರ ಭಾಗದಲ್ಲಿ ಕಾಮಣ್ಣನ ಪ್ರತಿಷ್ಠಾಪನೆ ಮಾಡಿ, ಹಬ್ಬದ ಬಳಕ ದಹನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಫೋಟೊ : ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ಮಕ್ಕಳು ಕಾಮದಹನಕ್ಕೆ ಸಿದ್ಧತೆ ಮಾಡಿಕೊಂಡಿರುವುದು.
ಫೋಟೊ : ಭದ್ರಾವತಿಯ ಬಡಾವಣೆಯೊಂದರಲ್ಲಿ ಮನ್ಮಥನ ಪ್ರತಿಷ್ಠಾಪನೆ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]