‘ತೀರ್ಥಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮೇಲೆ ಜೇನುಗಳು ದಾಳಿ ಮಾಡಿದ್ದವು, ಸಿನಿಮಾದಲ್ಲಿ ಅದು ಗೊತ್ತಾಗುತ್ತೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2021

ಸಿನಿಮಾ ಚಿತ್ರೀಕರಣಕ್ಕೆ ಬಂದಾಗ ತೀರ್ಥಹಳ್ಳಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಮೇಲೆ ಜೇನು ದಾಳಿಯಾಗಿತ್ತು. ಆದರೂ ಚಿತ್ರೀಕರಣ ಸ್ಥಗಿತಗೊಳಿಸಲು ಪುನೀತ್ ರಾಜ್ ಕುಮಾರ್ ಅವರು ಬಿಡಲಿಲ್ಲ ಎಂದು ನಿರ್ಮಾಪಕ ಜಯಣ್ಣ ಸ್ಮರಿಸಿಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಯಣ್ಣ ಅವರು ಪರಮಾತ್ಮ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಜೇನು ದಾಳಿಗೆ ತುತ್ತಾಗಿ ಕಣ್ಣಿನ ಭಾಗದಲ್ಲಿ ಊದಿಕೊಂಡಿದ್ದರೂ ಅಪ್ಪು ಅಭಿನಯಿಸಿದ್ದರು ಎಂದು ವಿವರಿಸಿದ್ದಾರೆ.

ಸೈಕಲ್ ರೈಡ್, ಜೇನು ದಾಳಿ

‘ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯುತಿತ್ತು. ಒಂದೆಡೆ ಮೂರು ರೂಮುಗಳನ್ನು ಮಾಡಿದ್ದೆವು. ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ರೂಮ್ ನೀಡಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಪುನೀತ್ ರಾಜ್ ಕುಮಾರ್ ಅವರು ಸೈಕಲ್ ತೆಗೆದುಕೊಂಡು ತೀರ್ಥಹಳ್ಳಿಯಲ್ಲಿ ಒಂದು ಸುತ್ತು ಹಾಕಿ ಬರಲು ಹೋಗಿದ್ದರು’

AVvXsEhukSpxMutW2NK9VKGYCJZbo5D pjw3GRDkWyD3QT v 5zYVwEgeYE3aEDsovr8qrBA UQyz9AQDDex3S4rTo4az0PahRQVwBlAZyMtGiVPmjIGkU LSlNTwwcQIsaKN5pfZRF1fn83VRNvDL6sSTDmd1NurZc7

‘ಆಗ ಪುನೀತ್ ಮೇಲೆ ಜೇನುಗಳು ದಾಳಿ ಮಾಡಿದ್ದವು. ಅವರ ಬೆನ್ನು, ಕಣ್ಣು ಸೇರಿದಂತೆ ವಿವಿಧೆಡೆ ಜೇನುಗಳು ಹೊಡೆದಿದ್ದವು. ರೂಮಿಗೆ ಬಂದಾಗ ಕಣ್ಣಿನ ಭಾಗದಲ್ಲಿ ಊದಿಕೊಂಡಿತ್ತು. ಕೂಡಲೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದೆವು. ಇಂತಹ ಸಂದರ್ಭದಲ್ಲಿ ಚಿತ್ರೀಕರಣ ಬೇಡ ನಿರ್ಧಾರ ಮಾಡಿದ್ದೆವು. ಆದರೆ ಪುನೀತ್ ಈ ನಿರ್ಧಾರವನ್ನು ಒಪ್ಪಲಿಲ್ಲಿ. ಯಾವುದೆ ಕಾರಣಕ್ಕೂ ಚಿತ್ರೀಕರಣ ನಿಲ್ಲಿಸಬಾರದು ಎಂದು ಪಟ್ಟು ಹಿಡಿದರು.’

AVvXsEjOWRXuWwsEGPCFKlSXEstO 6GhznZiqDNkkVh w8DFUNZyLOH3SxFsC M1dwPvC6l1zMXhDWk3ks1RSbJv bThcWdKOlMURMVq1zAI9dmQkinEQiIjcONgdaP JdI S1SdlzgBAKctjeLB8gmWGlyT wTs7aCJbqNrcBeerVAQlPUbj VebVooNb4YgA=s851

‘ಪರಮಾತ್ಮ ಸಿನಿಮಾದಲ್ಲಿ ರೆಂಗಾಯಣ ರಘು ಮತ್ತು ಪುನೀತ್ ಅವರು ದೋಣಿಯಲ್ಲಿ ಹೋಗುವ ಸೀನ್ ಇದೆ. ಅದರಲ್ಲಿ ಪುನೀತ್ ಅವರ ಕಣ್ಣುಗಳನ್ನು ಊದಿಕೊಂಡಿರುವುದನ್ನು ಗಮನಿಸಬಹುದು. ಅಷ್ಟು ನೋವಿದ್ದರೂ ಪುನೀತ್ ಅಭಿನಯಿಸಿದ್ದರು.’ ಎಂದು ನಿರ್ಮಾಪಕ ಜಯಣ್ಣ ಸ್ಮರಿಸಿಕೊಂಡಿದ್ದಾರೆ.

AVvXsEhquP07wZZlCXz1qCAkesmorG5TMcf4S I aPUW858ooQhkxiyfiF2yczUYDMEZtLyRPL8ZcVl7aWPGAL72bfbb1c2RlAsraR5M2WxoWTnimZBWptdJC1sh HQteS5ASXI4vSK3sYdrfRmmTi fUgveMJN1d8NJwiZg5fu4MHJdWCAOEYJOdAaLIcPIkQ=s1189

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment