ಶಿವಮೊಗ್ಗ : ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ಹನಿಟ್ರ್ಯಾಪ್ (Honey Trap) ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ) ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇನ್ನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲದ ಆರೋಪ ಮಾಡಿರುವ ಶಾಸಕ ಮುನಿರತ್ನಂನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಾಜ್ಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ದೇವೇಂದ್ರಪ್ಪ, ವಿಧಾನ ಮಂಡಲದ ಅಧಿವೇಶನದಲ್ಲಿ ಸಚಿವ ಕೆ.ಎನ್.ರಾಜಣ್ಣ 48 ರಾಜಕೀಯ ಮುಖಂಡರು ಹನಿಟ್ರ್ಯಾಪ್ಗೆ (Honey Trap) ಒಳಗಾಗಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಇದರ ಕುರಿತು ಎಸ್.ಐ.ಟಿ ಅಥವಾ ನ್ಯಾಯಾಂಗ ತನಿಖೆ ನಡೆಯಬೇಕು.
ಹನಿಟ್ರ್ಯಾಪ್ಗೆ ಒಳಗಾಗಿರುವ ಹೆಣ್ಮಕ್ಕಳಿಗೆ ಆಮಿಷ ಒಡ್ಡಲಾಗಿದೆಯೆ ಎಂಬ ಸತ್ಯ ಕೂಡ ಹೊರಬರಬೇಕಿದೆ. ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು. ಇನ್ನು, ಲೈಂಗಿಕ ದೌರ್ಜನ್ಯ ಎಸಗಿದ ಗಣ್ಯರ ವಿರುದ್ಧ ಸೂಕ್ತ ಕ್ರಮವಾಗಬೇಕಿದೆ.
– ಕೆ.ದೇವೇಂದ್ರಪ್ಪ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಶಾಸಕ ಮುನಿರತ್ನಂ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಮುನಿರತ್ನಂ ಅವರ ಹಿನ್ನಲೆಯೇ ಸರಿ ಇಲ್ಲ. ಅವರದ್ದು ಗೂಂಡ ಪ್ರವೃತ್ತಿ. ಆರ್.ಎಸ್.ಎಸ್ ಮತ್ತು ಎ.ಬಿ.ವಿ.ಪಿ ನಾಯಕರು ಮನಿರತ್ನಂಗೆ ಬೆಂಬಲಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ಕುಮಾರ್, ಸ್ಟೆಲ್ಲಾ ಮಾರ್ಟಿನ್, ವಿಜಯಲಕ್ಷ್ಮಿ ಪಾಟೀಲ್, ಅರ್ಚನಾ, ರೇಷ್ಮಾ, ರಮೇಶ್, ರೂಪಾ, ರಾಘವೇಂದ್ರ ಮತ್ತಿತರರಿದ್ದರು.
ಇದನ್ನೂ ಓದಿ » ಅಬಕಾರಿ ಕಾನ್ಸ್ಟೇಬಲ್ಗೆ ಕಪಾಳಮೋಕ್ಷ, ತಪಾಸಣೆಗೆ ಹೋದಾಗ ಇಬ್ಬರು ಸಿಬ್ಬಂದಿ ಮೇಲೆ ದಾಳಿ, ಏನಿದ ಕೇಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200