ಶಿವಮೊಗ್ಗದಲ್ಲಿ ಸೇನೆಯ ನಿವೃತ್ತ ಮಹಿಳಾ ಅಧಿಕಾರಿ, ಕ್ಯಾನ್ಸರ್‌ ಗೆಲ್ಲುವ ಸೂತ್ರ ತಿಳಿಸಿದ ಕರ್ನಲ್‌, ಏನದು?

ಶಿವಮೊಗ್ಗ : ಕ್ಯಾನ್ಸರ್‌ ಎಂಬ ಪದ ಕೇಳಿದ ತಕ್ಷಣ ಜೀವನವೆ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಭಯವನ್ನು ಬದಿಗಿಟ್ಟರೆ ಕ್ಯಾನ್ಸರ್‌ ಎಂಬ ಸುರಂಗದಿಂದ ಗೆದ್ದು ಹೊರ ಬರಬಹುದು. ಇದು ಕ್ಯಾನ್ಸರ್‌ (Cancer) ಗೆದ್ದು ಬಂದ ಕರ್ನಲ್‌ ಡಾ. ಗುಂಜನ್‌ ಮಲ್ಹೋತ್ರ ಅನುಭವದ ಮಾತು.

ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯ ಆನ್ಕೊಲಾಜಿ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕರ್ನಲ್‌ ಡಾ. ಗುಂಜನ್‌ ಮಲ್ಹೋತ್ರ, ತಾವು ಕ್ಯಾನ್ಸರ್‌ನಿಂದ (Cancer) ಪಾರಾದ ಅನುಭವ ಹಂಚಿಕೊಂಡರು.

ಕರ್ನಲ್‌ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

Web-Design

#f1f1f1 - POINT 1ನಾನು ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. ಖಜಕಿಸ್ತಾನದಲ್ಲಿಯು ಭಾರತೀಯ ಸೇನೆಗಾಗಿ ಕೆಲಸ ಮಾಡಿದ್ದೇನೆ. ಭಜದ ಬಳಿ ಗಂಟು ಕಾಣಿಸಿತ್ತು. ಆಗ ಆ್ಯಂಟಿ ಬಯೋಟಿಕ್‌ ತೆಗೆದುಕೊಂಡು ಗುಣವಾಗಿದ್ದೆ. 15 ದಿನದ ನಂತರ ಪರೀಕ್ಷೆಗೆ ಒಳಪಟ್ಟಾಗ ಕ್ಯಾನ್ಸರ್‌ ಎಂಬುದು ತಿಳಿಯಿತು. ಆರು ತಿಂಗಳು, 16 ಕಿಮೋಥೆರಪಿ ತೆಗೆದುಕೊಂಡೆ.

colonel Dr. Gunjan Malhotra speaks about facing Cancer at Nanjappa Life Care in Shimoga

ಇದನ್ನೂ ಓದಿ » ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾಪ್ಸುಲ್‌ ಎಂಡೋಸ್ಕೋಪಿ, ಏನಿದು? ಉಪಯೋಗವೇನು?

#f1f1f1 - POINT 2ಮೊದಲ ಕಿಮೋ ಸಂದರ್ಭ ಯಾವುದೇ ಬದಲಾವಣೆ ಆಗಲಿಲ್ಲ. ಎರಡನೇ ಬಾರಿ ಕೂದಲು ಉದುರಿದವು. ಮಹಿಳಾ ಕ್ಯಾನ್ಸರ್‌ ರೋಗಿಗಳಲ್ಲಿ ಇದು ಸಾಮಾನ್ಯ. ಸ್ತನ ಕ್ಯಾನ್ಸರ್‌ನಲ್ಲಿ ಮಹಿಳೆಯರು ಸ್ತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕಕ್ಕೀಡಾಗುತ್ತಾರೆ. ಆದರೆ ಪ್ಲಾಸ್ಟಿಕ್‌ ಸರ್ಜರಿ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದು.

colonel Dr. Gunjan Malhotra speaks about facing Cancer at Nanjappa Life Care in Shimoga

ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ

Kalleshwara-Enterprises.webp

#f1f1f1 - POINT 3ಕೋವಿಡ್‌ ಸಂದರ್ಭ ಸ್ತನ ಕ್ಯಾನರ್‌ ಎಂದು ಗೊತ್ತಾಗಿದ್ದು. ನಾನು ಬದುಕುವುದೇ ಇಲ್ಲ ಎಂದು ಭಾವಿಸಿದ್ದೆ. ಆದರೆ ದೇವರು ಮತ್ತು ವಿಧಿಯ ಬಗ್ಗೆ ನಂಬಿಕೆ ಹೊಂದಿದ್ದೇನೆ. ನಿತ್ಯ ಧ್ಯಾನ ಮಾಡಲು ಆರಂಭಿಸಿದೆ. ವೈಫಲ್ಯಗಳನ್ನು ಬದಿಗಿಟ್ಟು ಪಾಸಿಟಿವ್‌ ಆಲೋಚನೆಯಿಂದ ಚಿಕಿತ್ಸೆಗೆ ಒಳಗಾದೆ. ಹಾಗಾಗಿ ಕ್ಯಾನ್ಸರ್‌ (Cancer) ಎಂಬ ಸುರಂಗದಿಂದ ಹೊರ ಬರಲು ಸಾಧ್ಯವಾಯಿತು.

colonel Dr. Gunjan Malhotra speaks about facing Cancer at Nanjappa Life Care in Shimoga

ಇದನ್ನೂ ಓದಿ » ನಂಜಪ್ಪ ಲೈಫ್‌ ಕೇರ್‌ನಲ್ಲಿ ಟಿಎವಿಐ ಯಶಸ್ವಿ, ಏನಿದು? ಲಕ್ಷಣಗಳೇನು?

#f1f1f1 - POINT 4ತೂಕ ನಿಯಂತ್ರಣ, ಮದ್ಯ ಸೇವಿಸದಿರುವುದು, ನಿತ್ಯ ವ್ಯಾಯಾಮದ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ನಿಮಗೆ ಸಹಾಯ ಮಾಡಿದವರು, ಪೋಷಕರು, ಕಷ್ಟದಲ್ಲಿ ಜೊತೆಯಾಗಿ ನಿಂತವರನ್ನು ಮರೆಯಬೇಡಿ.

ಕಾರ್ಯಕ್ರಮದಲ್ಲಿ ನಂಜಪ್ಪ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಬೆನಕಪ್ಪ, ಸಿ.ಇ.ಒ ಡಾ. ಅವಿನಾಶ್‌, ಡಾ.ನಮ್ರತಾ, ಡಾ.ನಂದಿತಾ, ಡಾ.ಗುರುಚನ್ನ, ಡಾ.ಭಾರತಿ, ಡಾ.ವಿಶಾಲಾಕ್ಷಿ ಮೋಗಿ, ಡಾ.ಶಶಿಕಲಾ, ಡಾ.ಗೋವರ್ಧನ್, ಡಾ.ಶರತ್ ಚಂದ್ರ, ಡಾ.ಪ್ರಿಯಂವದಾ, ಡಾ.ನರೇಂದ್ರ ಸೇರಿದಂತೆ ಹಲವರು ಇದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್‌ ಸೀಕ್ರೆಟ್‌ ತಿಳಿಸಿದ ನಂಜಪ್ಪ ಟ್ರಸ್ಟ್‌ ಅಧ್ಯಕ್ಷ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment