ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 APRIL 2023
SHIMOGA : ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಮತದಾರರ ಪಟ್ಟಿ (Voters List) ಸಿದ್ಧವಾಗಿದೆ. ಇದರಲ್ಲಿ ನಿಮ್ಮ ಹೆಸರಿದೆಯಾ ತಿಳಿದುಕೊಳ್ಳಿ. ಇಲ್ಲವಾದಲ್ಲಿ 1950 ಹೆಲ್ಪ್‍ಲೈನ್ ನಂಬರ್‍ಗೆ ಕರೆ ಮಾಡಿ, ಈ ಕೂಡಲೆ ಮಾಹಿತಿ ಪಡೆದುಕೊಳ್ಳಿ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪಟ್ಟಿಯಲ್ಲಿ ಹೆಸರಿದ್ಯಾ? ನೋಡೋದು ಹೇಗೆ?
STEP 1 : ಮತಾದರರ ಪಟ್ಟಿಯಲ್ಲಿ (Voters List) ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://ceo.karnataka.gov.in/finalroll_2023/ ಇದು ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
STEP 2 : ಇಲ್ಲಿ 36 ಜಿಲ್ಲೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ನೀವು ಶಿವಮೊಗ್ಗ ಜಿಲ್ಲೆಯವರಾಗಿದ್ದರೆ, ಶಿವಮೊಗ್ಗ ಎಂದು ನೀಲಿ ಬಣ್ಣದಲ್ಲಿರುವ ಹೆಸರಿನ ಮೇಲೆ ಕ್ಲಿಕ್ ಮಾಡಿ.
STEP 3 : ಕ್ಷೇತ್ರಗಳ ಹೆಸರು ಕಾಣಿಸಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿವೆ. ಅವುಗಳ ಪಟ್ಟಿ ಪ್ರತ್ಯಕ್ಷವಾಗಲಿದೆ. ನಿಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ.
STEP 4 : ಇಲ್ಲಿ ಮತಗಟ್ಟೆಯ ಹೆಸರಿನ ಪಟ್ಟಿ ತೆರೆದುಕೊಳ್ಳಲಿದೆ. ಪ್ರತಿ ಮತಗಟ್ಟೆಯ ಹೆಸರಿನ ಮುಂದೆ MR ಎಂದು ಬರೆಯಲಾಗಿದೆ. MR ಮೇಲೆ ಕ್ಲಿಕ್ ಮಾಡಬೇಕು.
STEP 5 : ಸುರಕ್ಷತೆ ದೃಷ್ಟಿಯಿಂದ ಕ್ಯಾಪ್ಚಾ ಕೋಡ್ ನೀಡಲಾಗಿದೆ. ಅಲ್ಲಿ ತೋರಿಸುವ ಕ್ಯಾಪ್ಚಾ ಕೊಡ್ ಅನ್ನು ಬಾಕ್ಸ್‍ನಲ್ಲಿ ಎಂಟ್ರಿ ಮಾಡಿದರೆ, ಮತದಾರರ ಪಟ್ಟಿಯ ಪಿಡಿಎಫ್ ಕಾಪಿ ತೆರೆದುಕೊಳ್ಳಲಿದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಪರಿಶೀಲಿಸಿಕೊಳ್ಳಬಹುದು.
ಇದನ್ನೂ ಓದಿ – ನೀತಿ ಸಂಹಿತೆ, ಏನಿದು? ಹೇಗಿರುತ್ತೆ? ಜನ ತಿಳಿದುಕೊಳ್ಳಬೇಕಾದ 10 ಸಂಗತಿ ಇಲ್ಲಿದೆ