ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 6 JULY 2023
SHIMOGA : ತೀರ್ಥಹಳ್ಳಿ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾದ (Rain) ಹಿನ್ನೆಲೆ ತುಂಗಾ ಜಲಾಶಯ ಭರ್ತಿಯಾಗಿದೆ (inflow). ಎರಡು ಕ್ರಸ್ಟ್ ಗೇಟ್ ತೆಗೆದು ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಡ್ಯಾಂನಿಂದ ನೀರು ಹೊರಗೆ ಬಿಡುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಸೇತುವೆ ಬಳಿ ನೀರಿನ ಮಟ್ಟ ಹೆಚ್ಚಳವಾಗಿದೆ. ಜನರು ಸೇತುವೆ ಬಳಿಕ ವಾಹನಗಳನ್ನು ನಿಲ್ಲಿಸಿ, ತುಂಗಾ ನದಿ ತುಂಬಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಜಲಾಶಯಗಳ ಒಳ ಹರಿವು ಹೆಚ್ಚಳ
ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಬೆಳಗ್ಗೆ 8 ಗಂಟೆಯ ವರದಿ ಪ್ರಕಾರ ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದೆ. 12,082 ಕ್ಯೂಸೆಕ್ ಒಳಹರಿವು (inflow) ಇತ್ತು. 7,545 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಮೊದಲು ಒಂದು ಗೇಟ್ ಮೇಲೆತ್ತಿ ನೀರು ಹೊರಗೆ ಹರಿಸಲಾಗುತ್ತಿತ್ತು. ಪ್ರಸ್ತುತ ಎರಡು ಗೇಟ್ಗಳನ್ನು ಮೇಲೆತ್ತಲಾಗಿದೆ.
ಭದ್ರಾ ಜಲಾಶಯದ ಒಳ ಹರಿವು ಪ್ರಮಾಣದಲ್ಲಿಯು ಚೇತರಿಕೆ ಕಂಡು ಬಂದಿದೆ. 6,479 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ ಇದೆ. ಇವತ್ತು 138 ಅಡಿಯಷ್ಟು ನೀರಿನ ಸಂಗ್ರಹವಿದೆ.
ಲಿಂಗನಮಕ್ಕಿ ಜಲಾಶಯಕ್ಕೆ 15,466 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1,819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ 1,744.4 ಅಡಿಗೆ ತಲುಪಿದೆ.
ಮಾಣಿ, ಚಕ್ರ, ಸಾವೇಹಕ್ಲು ವರದಿ
ಮಾಣಿ : 595 (ಎಂಎಸ್ಎಲ್ಗಳಲ್ಲಿ), 571.48 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3670 ಕ್ಯೂಸೆಕ್ (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 574.18 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ – ಗಾಜನೂರು ಜಲಾಶಯದ ಗೇಟ್ ಓಪನ್, ಹೊಳೆಗೆ ಹೆಚ್ಚುವರಿ ನೀರು
ಪಿಕ್ಅಪ್ : 563.88 (ಎಂಎಸ್ಎಲ್ಗಳಲ್ಲಿ), 562.12 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1008 ಕ್ಯೂಸೆಕ್ (ಒಳಹರಿವು), 234 ಕ್ಯೂಸೆಕ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 562.60 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಜೋರು, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?
ಚಕ್ರ : 580.57 (ಎಂ.ಎಸ್.ಎಲ್ಗಳಲ್ಲಿ), 565.86 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2313 ಕ್ಯೂಸೆಕ್ (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 573.52 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಪ್ರಕಟ
ಸಾವೆಹಕ್ಲು : 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 573.28 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1143 ಕ್ಯೂಸೆಕ್ (ಒಳಹರಿವು), ಕಳೆದ ವರ್ಷ ನೀರಿನ ಮಟ್ಟ 577.76 (ಎಂಎಸ್ಎಲ್ಗಳಲ್ಲಿ).