ಶಿವಮೊಗ್ಗಕ್ಕೆ ರಥಯಾತ್ರೆ, ಯಾವ್ಯಾವ ದಿನ ಯಾವ್ಯಾವ ತಾಲೂಕಿನಲ್ಲಿ ಸಂಚರಿಸಲಿದೆ?

SHIMOGA NEWS, 10 OCTOBER 2024 : ‘ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡʼ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು (Rathayatre) ಅ.11 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 2023ರ ನವೆಂಬರ್ 1 ಕ್ಕೆ 50 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಕನ್ನಡ ಜ್ಯೋತಿ ರಥೆಯಾತ್ರೆ ನಡೆಸಲಾಗುತ್ತಿದೆ. 2023ರ ನ.2 ರಂದು ವಿಜಯನಗರ ಜಿಲ್ಲೆಯ ಹಂಪೆಯಲ್ಲಿ ರಥಾಯಾತ್ರೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ರಾಜ್ಯದ್ಯಾಂತ ಎಲ್ಲಾ ಜಿಲ್ಲೆಗಳಲ್ಲಿಯು ರಥಯಾತ್ರೆ ಸಂಚರಿಸುತ್ತಿದೆ. ಶಿವಮೊಗ್ಗ ಜಿಲ್ಲೆಗೆ ಅ.11 ರಂದು ಆಗಮಿಸಲಿದೆ.

dc-gurudatta-hegde-IAS-Shimoga

ಜಾನಪದ ಕಲಾತಂಡಗಳು ರಥಯಾತ್ರೆಯನ್ನು ಸ್ವಾಗತಿಸಲಿದೆ. ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಟನೆಗಳು ಭಾಗವಹಿಸಿ, ಬೀಳ್ಕೊಡಲಾಗುವುದು. ಅ.11 ರಂದು ಹೊಸನಗರ, ಅ.13 ರಂದು ತೀರ್ಥಹಳ್ಳಿ, ಅ.14 ರಂದು ಭದ್ರಾವತಿ, ಅ.15 ರಂದು ಶಿವಮೊಗ್ಗ, ಅ.16 ರಂದು ಶಿಕಾರಿಪುರ, ಅ.17 ರಂದು ಸೊರಬ ಮತ್ತು ಅ.18 ರಂದು ಸಾಗರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಎಷ್ಟೊತ್ತಿಗೆ ಮಳೆಯಾಗಬಹುದು?

Leave a Comment