SHIVAMOGGA LIVE NEWS | 23 FEBRUARY 2024
FILM NEWS : ಟೀಸರ್ಗಳ ಮೂಲಕ ಗಮನ ಸೆಳೆದಿದ್ದ ‘ಕೆರೆಬೇಟೆʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆರಂಭದರಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಾರು ಮಂದಿ ಈಗಾಗಲೇ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.
![]() |
ಅಪ್ಪಟ ಮಲೆನಾಡ ಸಂಸ್ಕೃತಿ ಪ್ರತಿಬಿಂಬ
ಮಲೆನಾಡಿನಲ್ಲಿ ಮೀನು ಬೇಟೆಯಾಡುವ ಪದ್ಧತಿಗೆ ಕೆರೆಬೇಟೆ ಅನ್ನಲಾಗುತ್ತದೆ. ಇದೇ ಹೆಸರಿನೊಂದಿಗೆ ಜನಮನ ಸಿನಿಮಾದ ವತಿಯಿಂದ ಕೆರೆಬೇಟೆ ಚಿತ್ರ ನಿರ್ಮಾಣ ಮಾಡಲಾಗಿದೆ. ಅಪ್ಪಟ ಮಲೆನಾಡ ಸಂಸ್ಕೃತಿಯನ್ನು ಸಿನಿಮಾದಲ್ಲಿ ಪ್ರತಿಬಿಂಬಿಸಲಾಗುತ್ತಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿತ್ತು. ಟ್ರೇಲರ್ನಲ್ಲಿ ಅದಕ್ಕೆ ಪುರಾವೆ ಒದಗಿಸಿದೆ.
ಟ್ರೇಲರ್ನ ಆರಂಭದಲ್ಲೆ ಅಂಟಿಗೆ – ಪಂಟಿಗೆ ಕಾಣಸಲಿದೆ. ಡೊಳ್ಳು, ಕೆರೆಬೇಟೆ, ಕುಣಿ, ಹಸೆ ಚಿತ್ತಾರ, ಕಡಬು, ಟಿಲ್ಲರ್, ಸೀಮೆ ಎಣ್ಣೆ ಬುಡ್ಡಿ, ಮಲೆನಾಡ ಭಾಷೆ, ಇಲ್ಲಿನ ಪರಿಸರ, ಇಲ್ಲಿನವರು ಬೀಡಿ ಸೇದುವ ಸ್ಟೈಲ್, ನಾಟ ಕಳವು ಎಲ್ಲವು ಟ್ರೇಲರ್ನಲ್ಲಿ ಗಮನ ಸೆಳೆಯುತ್ತವೆ.
ಇಲ್ಲಿದೆ ಟ್ರೇಲರ್
ತೀರ್ಥಹಳ್ಳಿಯ ಯುವಕ ಸಿನಿಮಾ ಹೀರೋ
ಈ ಹಿಂದೆ ಜೋಕಾಲಿ, ರಾಜಹಂಸ ಸಿನಿಮಾಗಳಲ್ಲಿನ ಅಭಿನಯದ ಮೂಲಕ ಕನ್ನಡದ ವೀಕ್ಷಕರಿಗೆ ಪರಿಚಯವಾಗಿರುವ ತೀರ್ಥಹಳ್ಳಿಯ ಗೌರಿಶಂಕರ್ ಎಸ್ಆರ್ಜಿ, ಕೆರೆಬೇಟೆಯ ಮುಖ್ಯ ಪಾತ್ರಧಾರಿ. ನಾಯಕಿಯಾಗಿ ಬಿಂಧು ಶಿವರಾಮ್ ಅಭಿನಯಿಸಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ನಿರ್ದೇಶಕ ರಾಜ್ಗುರು ಅವರಿಗು ಇದು ಮೊದಲ ಪ್ರಯತ್ನ. ಮಲೆನಾಡು ಭಾಗದ ಹಲವರು ಈ ಸಿನಿಮಾ ತಂಡದಲ್ಲಿದ್ದಾರೆ. ಹಾಗಾಗಿ ಕೆರೆಬೇಟೆ ಮಲೆನಾಡಿಗರಿಗೆ ರಸದೌತಣ ನೀಡಲಿದೆ ಎಂಬ ಅಭಿಪ್ರಾಯವಿದೆ. ಮಾರ್ಚ್ 15ಕ್ಕೆ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ – ಶಿವಮೊಗ್ಗದವರೇ ನಿರ್ಮಿಸಿ, ನಿರ್ದೇಶಿಸಿರುವ ಶಾಖಾಹಾರಿ ಸಿನಿಮಾ ಬಿಡುಗಡೆ ಡೇಟ್ ಘೋಷಣೆ, ಹೇಗಿದೆ ಚಿತ್ರ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200