ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | SHIMOGA NEWS | 6 APRIL 2021
ಆರನೆ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ, ಕೆಎಸ್ಆರ್ಟಿಸಿ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ನಡುವೆ ಇವತ್ತಿಂದಲೇ ಮುಷ್ಕರದ ಬಿಸಿ ತಟ್ಟಲು ಆರಂಭವಾಗಿದೆ.
ಮುಷ್ಕರದ ಮುನ್ನಾ ದಿನವೇ ಶಿವಮೊಗ್ಗದಲ್ಲಿ ಶೇ.50ರಷ್ಟು ಬಸ್ ಸಂಚಾರ ಕಡಿತವಾಗಿದೆ ಶಿವಮೊಗ್ಗ ವಿಭಾಗದ ನಾಲ್ಕು ಘಟಕಗಳಿಂದ 205 ಬಸ್ಸುಗಳ ಪೈಕಿ ಈತನಕ 107 ಬಸ್ಸುಗಳು ಮಾತ್ರ ಹೊರ ಊರುಗಳಿಗೆ ಸಂಚರಿಸಿವೆ ಎಂದು ಹೇಳಲಾಗುತ್ತಿದೆ. ವಿವಿಧೆಡೆಯಿಂದ ಜಿಲ್ಲೆಗೆ ಬರುವ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ.
ಪ್ರಯಾಣಿಕರ ಪರದಾಟ ಶುರು
ದೂರದ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿರುವ ಪ್ರಯಾಣಿಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ಸುಗಳಿಗೆ ಕಾಯುವವರ ಸಂಖ್ಯೆ ಹೆಚ್ಚುತ್ತಿದೆ.
ಶಿವಮೊಗ್ಗ ಜಿಲ್ಲೆಯೊಳಗೆ ತಟ್ಟುವುದಿಲ್ಲ ಬಿಸಿ
ಸಾರಿಗೆ ನೌಕರರು ಮುಷ್ಕರ ನಡೆಸಿದರೂ ಜಿಲ್ಲೆಯೊಳಗೆ ಪ್ರಯಾಣಿಕರಿಗೆ ಅದರ ಬಿಸಿ ತಟ್ಟುವುದಿಲ್ಲ. ಜಿಲ್ಲೆಯ ಬಹುತೇಕ ರೂಟ್ಗಳಲ್ಲಿ ಖಾಸಗಿ ಬಸ್ಗಳೇ ಸಂಚರಿಸುತ್ತಿವೆ. ಹಾಗಾಗಿ ಬಹುತೇಕ ಪ್ರಯಾಣಿಕರು ಖಾಸಗಿ ಬಸ್ಗಳ ಮೇಲೆ ಅವಲಂಬಿತವಾಗಿದ್ದಾರೆ. ಶಿವಮೊಗ್ಗ ಭದ್ರಾವತಿ, ಶಿವಮೊಗ್ಗ ಹೊನ್ನಾಳಿ ರೂಟ್ಗಳಲ್ಲಿ ಮಾತ್ರ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಯೋಜಿಸಿದೆ.
ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ
ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ತಡೆಯಲು ಖಾಸಗಿ ಬಸ್ಗಳ ಸಂಚಾರಕ್ಕೆ ಜಿಲ್ಲಾಡಳಿತ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿಯಿಂದ ಜಿಲ್ಲಾಡಳಿತ ವರದಿ ಪಡೆದುಕೊಂಡಿದೆ. ಶಿವಮೊಗ್ಗ ವಿಭಾಗದಿಂದ ಎಷ್ಟು ಬಸ್ಸುಗಳು ಸಂಚಾರ ಮಾಡುತ್ತವೆ, ಯಾವೆಲ್ಲ ಮಾರ್ಗಗಳಲ್ಲಿ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ ಅನ್ನುವದರ ಮಾಹಿತಿ ಪಡೆಯಲಾಗಿದೆ. ಬುಧವಾರ ಬೆಳಗ್ಗೆಯಿಂದ ಅನಿವಾರ್ಯತೆ ಉಂಟಾದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.




ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com






