ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 30 JULY 2024 : ಧಾರಾಕಾರ ಮಳೆಗೆ ಲಿಂಗನಮಕ್ಕಿ ಜಲಾಶಯದ (DAM) ಒಳ ಹರಿವು ಹೆಚ್ಚಳವಾಗಿದೆ. ಯಾವುದೇ ಸಂದರ್ಭ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ, ಹಳ್ಳಿಗೆ ಹಳ್ಳಿಗೆ ತೆರಳಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭರ್ತಿಯ ಸನಿಹಕ್ಕೆ ಲಿಂಗನಮಕ್ಕಿ ಡ್ಯಾಂ
ಲಿಂಗನಮಕ್ಕಿ ಜಲಾಶಯು ಭರ್ತಿಯ ಸನಿಹಕ್ಕೆ ತಲುಪಿದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1811.50 ಅಡಿಗೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ 92 ಸಾವಿರ ಕ್ಯೂಸೆಕ್‌ಗಿಂತಲು ಹೆಚ್ಚಿನ ಪ್ರಮಾಣದ ಒಳ ಹರಿವು ದಾಖಲಾಗಿದೆ.
ಆ.1ರಂದು ನದಿಗೆ ನೀರು
ಇನ್ನು, ಆಗಸ್ಟ್ 1ರಂದು ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಲು ತೀರ್ಮಾನಿಸಲಾಗಿದೆ. 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ಅಚ್ಚುಕಟ್ಟು ವ್ಯಾಪ್ತಿಯ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಜೀಪ್‌ಗೆ ಮೈಕ್ ಕಟ್ಟಿಕೊಂಡು ನದಿ ಪಾತ್ರದ ಗ್ರಾಮಗಳಿಗೆ ತೆರಳಿ ಅನೌನ್ಸ್ ಮಾಡಲಾಗುತ್ತಿದೆ.
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ