ಊರಿಗೆ ಹೊರಟಾಗ ವಾಟ್ಸಪ್‌ ಮಾಡಿದರೆ ಮನೆಗೆ ಭದ್ರತೆ, ಶಿವಮೊಗ್ಗದಲ್ಲಿ LHBS ಶುರು, ಏನಿದು?

ಶಿವಮೊಗ್ಗ: ಯಾರೂ ಇಲ್ಲದ ಮನೆಗಳ ಕಳ್ಳತನ ತಡೆಯುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್ (Locked House Beat System) ಉಪಕ್ರಮವನ್ನು ಜಿಲ್ಲೆಯಲ್ಲಿ ಜಾರಿಗೆ ತಂದಿದೆ. ಇಲಾಖೆ ನೀಡಿರುವ ವಾಟ್ಸಪ್ ಸಂಖ್ಯೆಗೆ ಮೆಸೇಜ್‌ ಕಳುಹಿಸಿ ಮಾಹಿತಿ ನೀಡಿದರೆ, ಪೊಲೀಸ್ ಇಲಾಖೆ ಅಂತಹ ಖಾಲಿ ಮನೆಗಳ ಮೇಲೆ ನಿಗಾ ವಹಿಸಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ತಿಳಿಸಿದರು.

ಡಿ.ಎ.ಆರ್‌ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿ.ನಿಖಿಲ್‌, ಕೆಲ ದಿನಗಳ ಕಾಲ ಆಚೆ ಹೋಗುವಾಗ ಮನೆಯ ಮಾಲೀಕರು ನಮಗೆ ತಿಳಿಸಿದರೆ ಲಾಕ್ಡ್‌ ಹೌಸ್ ಬೀಟ್ ಸಿಸ್ಟಮ್ ಮೂಲಕ ಅವರ ಮನೆಯ ಮೇಲೆ ನಿಗಾ ವಹಿಸುತ್ತೇವೆ. ಈ ಉಪಕ್ರಮ ಜಿಲ್ಲಾದ್ಯಂತ ಮೇ 1ರಿಂದ ಜಾರಿಗೆ ಬಂದಿದೆ ಎಂದರು.

Shivamogga Police Locked House Beat System

Locked-House-beat-system-launched-in-Shimoga-by-SP-Nikhil

ಪೊಲೀಸರಿಗೆ ಮಾಹಿತಿ ನೀಡುವುದು ಹೇಗೆ?

8277982901 ಈ ಸಂಖ್ಯೆಗೆ ಮನೆಯಿಂದ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಹಾಗೂ ಲೊಕೇಶನ್ ಮತ್ತು ಮನೆಯ ಎದುರು ನಿಂತು ಸೆಲ್ಫಿ ಪೋಟೊ ತೆಗೆದು ವಾಟ್ಸಪ್‌ನಲ್ಲಿ ಮೆಸೇಜ್‌ ಕಳುಹಿಸಬೇಕು.

ಇದನ್ನೂ ಓದಿ : ಶಿವಮೊಗ್ಗದ ಲೇಔಟ್‌ಗಳಲ್ಲಿ ಪಾರ್ಟಿ ಮಾಡ್ತಿದ್ದಾಗ ‘ಡ್ರೋಣ್‌ ದಾಳಿʼ

ಆ ಮನೆಯನ್ನು ಕಂಟ್ರೋಲ್ ರೂಂ ಯುನಿಟ್ ನಿಗಾ ವಹಿಸಲಾಗುವುದು. ಇದರಲ್ಲಿ ಯಾವುದೆ ಮಾಹಿತಿ ಸೋರಿಕೆಯಾಗುವುದಿಲ್ಲ. ಗೌಪ್ಯತೆಗೆ ಆದ್ಯತೆ ನೀಡಲಾಗುವುದು.

Shivamogga Police Locked House Beat System

ತಿಂಗಳುಗಟ್ಟಲೆ ಮನೆ ಖಾಲಿ ಬಿಡುವುದಾದರೆ ಅಂತಹ ಮನೆಗಳಿಗೆ ಇಲಾಖೆಯಿಂದಲೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಯೂ ನಮ್ಮ ಮುಂದಿದೆ. ನಗರ ಪ್ರದೇಶದಲ್ಲಿ ಒಟ್ಟು 20,366 ಸಿಸಿಟಿವಿ ಕ್ಯಾಮೆರಾಗಳಿವೆ ಎಂದರು.

ಇಲಾಖೆಯ ಆಸರೆ ಕಾರ್ಯಕ್ರಮದಲ್ಲಿ ಒಂಟಿ ಮನೆ, ಹಿರಿಯ ನಾಗರಿಕರ ಮನೆ ಮೇಲೆ ನಿಗಾ ವಹಿಸಲಾಗುತ್ತಿದೆ. ನಾವು ಎರಡು ದಿನಕ್ಕೊಮ್ಮೆ ಪೋನ್ ಮಾಡಿ ಅವರಿಂದ ಮಾಹಿತಿ ಪಡೆದು, ಅವರ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Shivamogga Police Locked House Beat System

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಡಿವೈಎಸ್‌ಪಿ ಬಾಬು ಅಂಜಿನಪ್ಪ ಇದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment