ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 MAY 2024
SHIMOGA : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಭಾರಿ ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಇಳೆ ತಂಪಾಗಿದೆ. ಹೈರಾಣಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಮಧ್ಯೆ ಜಿಲ್ಲೆಯಲ್ಲಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿ (loss) ಸಂಭವಿಸಿದೆ. ಏ.1 ರಿಂದ ಮೇ 21ರವರೆಗಿನ ವರದಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಜಿಲ್ಲೆಯಲ್ಲಿ ಏನೇನು ಹಾನಿಯಾಗಿದೆ?
ಪಾಯಿಂಟ್ 1 : ಪ್ರಾಣ ಹಾನಿ
ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಒಟ್ಟು 24 ಪ್ರಾಣಿಗಳು ಸಾವನ್ನಪ್ಪಿವೆ. ಈ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ 19 ಪ್ರಾಣಿಗಳು, ಶಿಕಾರಿಪುರದಲ್ಲಿ 2, ತೀರ್ಥಹಳ್ಳಿ, ಸಾಗರ, ಸೊರಬದಲ್ಲಿ ತಲಾ ಒಂದು ಪ್ರಾಣಿಗಳು ಸಾವನ್ನಪ್ಪಿವೆ.
ಪಾಯಿಂಟ್ 2 : ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ 24 ಭಾಗಶಃ ಹಾನಿಯಾಗಿದೆ. ಈ ಪೈಕಿ ಶಿವಮೊಗ್ಗ ತಾಲೂಕಿನ 9 ಮನೆಗಳು ಹಾನಿಯಾಗಿವೆ. ಭದ್ರಾವತಿಯಲ್ಲಿ 3, ತೀರ್ಥಹಳ್ಳಿಯಲ್ಲಿ 6, ಸಾಗರ 2, ಶಿಕಾರಿಪುರದಲ್ಲಿ 3, ಸೊರಬದಲ್ಲಿ 3, ಹೊಸನಗರದಲ್ಲಿ ಒಂದು ಮನೆ ಹಾನಿಯಾಗಿವೆ. ತೀರ್ಥಹಳ್ಳಿ ತಾಲೂಕಿನಲ್ಲಿ ಎರಡು ಕೊಟ್ಟಿಗೆಗಳಿಗೆ ಹಾನಿಯಾಗಿವೆ.
ಪಾಯಿಂಟ್ 3 : ಮನೆಗೆ ನುಗ್ಗಿದ ನೀರು
ಇನ್ನೊಂದೆಡೆ ಮೇ 20 ರಂದು ಸುರಿದ ಮಳೆಗೆ ಶಿವಮೊಗ್ಗ ತಾಲೂಕಿನ ಗೋಂದಿ ಚಟ್ನಹಳ್ಳಿ ಗ್ರಾಮದಲ್ಲಿ 9 ಮನೆಗಳು, ಶಿವಮೊಗ್ಗದ ಆರ್ಎಂಎಲ್ ನಗರ, ಬಾಪೂಜಿ ನಗರ, ಸಿದ್ದೇಶ್ವರ ನಗರದಲ್ಲಿ ಒಟ್ಟು 259 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ರಾಜ್ಯದಲ್ಲಿ ಕಡಿಮೆಯಾದ ಮಳೆ ಆರ್ಭಟ, ಮುಂಗಾರು ಕುರಿತು ಹೊರಬಿತ್ತು ಮಹತ್ವದ ಮಾಹಿತಿ
ಪಾಯಿಂಟ್ 4 : ಮೆಸ್ಕಾಂಗೆ ಲಕ್ಷ ಲಕ್ಷ ಹಾನಿ
ಈತನಕ ಮಳೆ, ಗಾಳಿಗೆ ಜಿಲ್ಲೆಯ ವಿವಿಧೆಡೆ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಿತ್ತು. ಮೇ ತಿಂಗಳಲ್ಲಿ 310 ಗ್ರಾಮಗಳಿಗೆ ವಿದ್ಯುತ್ ಪೂರೈಕೆಗೆ ಅಡಚಣೆಯಾಗಿತ್ತು. 299 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಯಥಾಸ್ಥಿತಿಗೆ ತರಲಾಗಿದೆ. ಒಟ್ಟು 41 ಪರಿವರ್ತಕ ಹಾನಿಯಾಗಿದೆ. ಈಗ ಎಲ್ಲ ಪರಿವರ್ತಕಗಳನ್ನು ರಿಪೇರಿ ಮಾಡಲಾಗಿದೆ. ಒಟ್ಟು 551 ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದವು. 11.40 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿತ್ತು. ಮೆಸ್ಕಾಂಗೆ ಈತನಕ ಒಟ್ಟು 63.4 ಲಕ್ಷ ರೂ. ಹಾನಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422