ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಕ್ಷೀಣಿಸಿದೆ. ಜೂನ್‌ 11ರ ಬೆಳಗ್ಗೆ 8:30 ರಿಂದ ಜೂನ್‌ 12ರ ಬೆಳಗ್ಗೆ 8:30ರವರೆಗೆ ಜಿಲ್ಲೆಯಲ್ಲಿ ಸರಾಸರಿ 25.60 ಮಿ.ಮೀ ಮಳೆ ದಾಖಲಾಗಿದೆ. ತಾಲ್ಲೂಕುವಾರು ವರದಿಯಲ್ಲಿ ಸಾಗರ ಹಾಗೂ ಹೊಸನಗರ ಭಾಗದಲ್ಲಿ ಉತ್ತಮ ಮಳೆಯಾಗಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಜೂನ್‌ 12ರಂದು ಸಾಗರ ತಾಲೂಕಿನಲ್ಲಿ 8 ಮಿ.ಮೀ ಮಳೆಯಾಗಿದೆ. ಹೊಸನಗರ 7.90 ಮಿ.ಮೀ, ತೀರ್ಥಹಳ್ಳಿ 4.40 ಮಿ.ಮೀ, ಸೊರಬ 2.60 ಮಿ.ಮೀ, ಶಿಕಾರಿಪುರ 1 ಮಿ.ಮೀ, ಭದ್ರಾವತಿ ತಾಲೂಕಿನಲ್ಲಿ 0.90 ಮಿ.ಮೀ ಮತ್ತು ಶಿವಮೊಗ್ಗ ತಾಲ್ಲೂಕಿನಲ್ಲಿ 0.80 ಮಿ.ಮೀ ನಷ್ಟು ಮಳೆಯಾಗಿದೆ. ಜೂನ್‌ ತಿಂಗಳ ಒಟ್ಟು ಮಳೆ ಪ್ರಮಾಣವನ್ನು ಗಮನಿಸಿದರೆ ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 437.20 ಮಿ.ಮೀ ಮಳೆ ಬಿದ್ದಿದೆ.

Lady-holding-umbrella-and-walking-on-the-road-during-rainfall