ನಾಲ್ಕು ದಿನ ಮಿನಿಸ್ಟರ್‌ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ, ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಏ.19ರಿಂದ ನಾಲ್ಕು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ (Tour) ಮಾಡಲಿದ್ದಾರೆ. ವಿವಿಧೆಡೆ ಸಭೆ, ಸಮಾರಂಭಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಯಾವ್ಯಾವ ದಿನ ಎಲ್ಲಿಗೆ ಪ್ರವಾಸ?

ಏ.19ರಂದು ಬೆಳಗ್ಗೆ 10.30ಕ್ಕೆ ಸೊರಬ ತಾಲೂಕು ಬಿಳಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಕೋಟಿಪುರದಲ್ಲಿರುವ ಶ್ರೀ ಸೇವಾಲಾಲ್‌ ದೇವಸ್ಥಾನದಲ್ಲಿ ಸಂತ ಸೇವಾಲಾಲ್‌ರ 285ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7ಕ್ಕೆ ಹಿರೇಮಾಗಡಿಯಲ್ಲಿ ಶ್ರೀ ಶಿವಮೂರ್ತಿ ಸ್ವಾಮೀಜಿಯ 75ನೇ ಅಮೃತ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಸೊರಬದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಜನಿವಾರ ವಿವಾದಕ್ಕೆ ಟ್ವಿಸ್ಟ್‌, ಅಧಿಕಾರಿ ವಿರುದ್ಧ ಕಂಪ್ಲೇಂಟ್‌, ಈತನಕ ಏನೇನಾಗಿದೆ? ಇಲ್ಲಿದೆ ಡಿಟೇಲ್ಸ್‌

ಏ.20ರಂದು ಸಚಿವ ಮಧು ಬಂಗಾರಪ್ಪ ಉತ್ತರ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ. ಶಿರಸಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಏ.21ರಂದು ಬೆಳಗ್ಗೆ 10.30ಕ್ಕೆ ಹೊಸನಗರದ ಈಡಿಗರ ಸಭಾ ಭವನದಲ್ಲಿ ಜನಸ್ಪಂದನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾತ್ರಿ ಸೊರಬದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

Madhu-Bangarappa-Minister

ಇದನ್ನೂ ಓದಿ » ಓಮ್ನಿ ಕಾರು ಅಡ್ಡಗಟ್ಟಿ ಲಕ್ಷ ಲಕ್ಷದ ಗುಜರಿ ವಸ್ತು ದರೋಡೆ, ನಾಲ್ವರು ಅರೆಸ್ಟ್‌, ಏನಿದು ಕೇಸ್‌?

ಏ.22ರಂದು ಬೆಳಗ್ಗೆ 9ಕ್ಕೆ ಸೊರಬದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಅವರ 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಸೊರಬದ ರಂಗಮಂದಿರದಲ್ಲಿ ತಾಲೂಕು ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment