ಶಿವಮೊಗ್ಗ ಲೈವ್.ಕಾಂ | SHIMOGA NEWS | 13 JUNE 2021
ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ಬಿರುಸಾಗಿದೆ. ವಿವಿಧೆಡೆ ಬಿಡುವು ಕೊಡದೆ ನಿರಂತರ ಮಳೆಯಾಗುತ್ತಿದೆ.
ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಕೆಲವೆಡೆ ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಶೀತಗಾಳಿ ಮತ್ತು ಮಳೆಯಿಂದಾಗಿ ಜನರು ಅನಾರೋಗ್ಯಕ್ಕೀಡಾಗುವ ಭೀತಿಯಲ್ಲಿದ್ದಾರೆ.
ಆಗುಂಬೆಯಲ್ಲಿ ಜೋರು ಮಳೆ
ಕಳೆದ 24 ಗಂಟೆ ಅವಧಿಯಲ್ಲಿ ಆಗುಂಬೆಯಲ್ಲಿ ಭಾರಿ ಮಳೆಯಾದ ವರದಿಯಾಗಿದೆ. ತೀರ್ಥಹಳ್ಳಿಯ ಆಗುಂಬೆಯಲ್ಲಿ 126 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಕರೆಂಟ್ ಕಟ್, ನೆಟ್‍ವರ್ಕ್ ಡೌನ್
ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವು ಭಾಗದಲ್ಲಿ ಕರೆಂಟ್ ಕಟ್ ಆಗಿದೆ. ಪ್ರತಿ ಮಳೆಗಾಲದಂತೆ ಈ ಮಳೆಗಾಲದಲ್ಲೂ ಜನರು ಕತ್ತಲಲ್ಲಿ ದಿನ ದೂಡುವಂತಾಗಿದೆ. ಇನ್ನು, ಜೋರು ಮಳೆಯಿಂದಾಗಿ ಮೊಬೈಲ್ ನೆಟ್‍ವರ್ಕ್ ಕೈಕೊಟ್ಟಿದೆ. ಇದರಿಂದ ವರ್ಕ್ ಫ್ರಂ ಹೋಂ ಮತ್ತು ಆನ್ ಲೈನ್ ಕ್ಲಾಸ್‍ಗೆ ತೊಂದರೆ ಉಂಟಾಗಿದೆ.
ಶಿವಮೊಗ್ಗ ಸಿಟಿಯಲ್ಲೂ ಮಳೆ
ಶಿವಮೊಗ್ಗ ನಗರದಲ್ಲಿ ಕಳೆದೆರಡು ದಿನದಿಂದ ಮಳೆಯಾಗುತ್ತಿದೆ. ಜೋರು ಮಳೆಯಾಗದಿದ್ದರೂ ವರುಣ ಕೊಂಚ ಬಿಡುವು ನೀಡುತ್ತಿದ್ದಾನೆ. ಜನರು ಕಚೇರಿ, ಅಗತ್ಯ ವಸ್ತುಗಳ ಖರೀದಿಗೆ ತೆರಳಲು ಅವಕಾಶವಾಗುತ್ತಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]