ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕು, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE | 29 JUNE 2023

SHIMOGA : ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆದಿದೆ.‌ ಇವತ್ತು ಬೆಳಗ್ಗೆಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ (Monsoon Rain). ಶುಕ್ರವಾರ ಬೆಳಗ್ಗೆವರೆಗೆ ಎಲ್ಲೆಡೆ ಉತ್ತಮ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

Two-Young-Ladies-walk-holding-umbreall-in-Rain

ರೈತರ ಮೊಗದಲ್ಲಿ ಮಂದಹಾಸ

ಮುಂಗಾರು ಆರಂಭವಾಗಿದ್ದರು ಬಿರುಸು ಪಡೆದಿರಲಿಲ್ಲ. ಆಗಾಗ ಸೋನೆ ಸುರಿದು ಕಣ್ಮರೆಯಾಗುತ್ತಿತ್ತು. ಮಳೆಗಾಲದಲ್ಲಿಯು ಬೇಸಿಗೆಯಂತಹ ಬಿಸಿಲು ಕಂಡು ರೈತರು ಸಂಕಷ್ಟಕ್ಕೀಡಾಗಿದ್ದರು. ಬೇಸಾಯ ಹೂಡಿ, ಭೂಮಿ ಹದ ಮಾಡಿಕೊಟ್ಟುಕೊಂಡಿದ್ದರು ಬಿತ್ತನೆ ಕಾರ್ಯ ಚುರುಕು ಪಡೆದಿರಲಿಲ್ಲ. ಇವತ್ತು ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಪುನಃ ಬಿರುಸು ಪಡೆದುಕೊಂಡಿದೆ.

Rain-General-Image-youth-With-an-Umbrella

24 ಗಂಟೆಯಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 5.6 ಮಿ.ಮೀ ನಷ್ಟು ಮಳೆಯಾಗಿದೆ. ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಸಾಗರದಲ್ಲಿ 10.9 ಮಿ.ಮೀ, ಹೊಸನಗರದಲ್ಲಿ 7.7 ಮಿ.ಮೀ, ತೀರ್ಥಹಳ್ಳಿಯಲ್ಲಿ 5.5 ಮಿ.ಮೀ, ಸೊರಬ 2.9 ಮಿ.ಮೀ, ಶಿಕಾರಿಪುರದಲ್ಲಿ 2.3 ಮಿ.ಮೀ, ಶಿವಮೊಗ್ಗ 1.9 ಮಿ.ಮೀ, ಭದ್ರಾವತಿ 1.2 ಮಿ.ಮೀ ಮಳೆಯಾಗಿದೆ (Monsoon Rain).

ಶೇ.77ರಷ್ಟು ಮಳೆ ಕೊರತೆ

ವಾಡಿಕೆಯಂತೆ ಜಿಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 22.5 ಮಿ.ಮೀ ಮಳೆಯಾಗಬೇಕಿತ್ತು. ಆದರೆ 5.6 ಮಿ.ಮೀ ಮಳೆಯಾಗಿದೆ. ಶೇ. 75ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ಈವರೆಗೆ 446 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈವರೆಗೆ 105 ಮಿ.ಮೀ ಮಳೆಯಾಗಿದೆ. ಶೇ 77ರಷ್ಟು ಮಳೆ ಕೊರತೆಯಾಗಿದೆ.

Rain-General-Image

ಇದನ್ನೂ ಓದಿ – GOOD NEWS – ಶಿವಮೊಗ್ಗದಿಂದ 4 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ, ಯಾವ್ಯಾವ ಮಾರ್ಗಗಳು?

ಇವತ್ತು ಉತ್ತಮ ಮಳೆಯ ನಿರೀಕ್ಷೆ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇನ್ನು 24 ಗಂಟೆ ಅವಧಿಯಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬದ ವಿವಿಧೆಡೆ ಹೆಚ್ಚು ಮಳೆಯಾಗುವ ಸಂಭವವಿದೆ. ಶಿವಮೊಗ್ಗ, ಶಿಕಾರಿಪುರ, ಭದ್ರಾವತಿಯಲ್ಲಿ ಸಾಧಾರಣ ಅಥವಾ ಕಡಿಮೆ ಮಳೆಯಾಗಲಿದೆ. ಶಿವಮೊಗ್ಗ ನಗರದಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment