ಶಿವಮೊಗ್ಗ ಲೈವ್.ಕಾಂ | NATIONAL NEWS | 22 ಮಾರ್ಚ್ 2021
ದೆಹಲಿ ಸರ್ಕಾರ ಕುಡಿತದ ವಯೋಮಿತಿಯನ್ನು ಇಳಿಕೆ ಮಾಡಿದೆ. ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಸರ್ಕಾರ, ವಯೋಮಿತಿ ಇಳಿಕೆ ಮಾಡಿದೆ.
ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಪರಿಷ್ಕೃತ ಅಬಕಾರಿ ನೀತಿಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮದ್ಯ ಸೇವನೆಗೆ ಹಿಂದೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಗೊಳಿಸಲಾಗಿದೆ. 25 ವರ್ಷ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಲಾಗಿದೆ.
ತಜ್ಞರ ಸಮಿತಿ ಕೊಟ್ಟಿರುವ ಆದೇಶದ ಮೇರೆಗೆ ವಯೋಮಿತಿಯನ್ನು ಇಳಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ.
ನೂತನ ಮದ್ಯದ ಅಂಗಡಿಗಳನ್ನು ತೆರೆಯುವುದಕ್ಕೆ ಪರವಾನಗಿ ನೀಡುವುದಿಲ್ಲ ಎಂದು ದೆಹಲಿ ಸರ್ಕಾರ ತಿಳಿಸಿದೆ. ಪರವಾನಗಿ ಇಲ್ಲದ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಮತ್ತೊಂದೆಡೆ ಒಂದೇ ಪರವಾನಗಿಯಲ್ಲಿ ಹಲವು ಶಾಖೆಗಳನ್ನು ತೆರೆಯುವುದು ಸೇರಿದಂತೆ ಹಲವು ಅಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ ಎಂದು ಮನಿಷ್ ಸಿಸೋಡಿಯಾ ಹೇಳಿದರು.