SHIVAMOGGA LIVE NEWS | 1 NOVEMBER 2022
MUMBAI | ಸದ್ಯದಲ್ಲೇ ಪೆಟ್ರೋಲ್, ಡಿಸೇಲ್ ದರದಲ್ಲಿ ತುಸು ಇಳಿಕೆಯಾಗುವ (PETROL PRICE) ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ದರ ಏರಿಕೆ ಬಿಸಿಯನ್ನು ಕೊಂಚ ತಗ್ಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2ರೂ.ನಷ್ಟು ಇಳಿಕೆಯಾಗುವ ಸಂಭವವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ (PETROL PRICE) ದರ ಪ್ರತಿ ಲೀಟರ್ ಗೆ 103.45 ರೂ. ಇದೆ. ಬೆಂಗಳೂರಿನಲ್ಲಿ 101.92 ರೂ. ಇದೆ.
ದೇಶಾದ್ಯಂತ ಅಕ್ಟೋಬರ್ ತಿಂಗಳ ಮೊದಲರ್ಧದಲ್ಲಿ ತೈಲೋತ್ಪನ್ನಗಳ ಮಾರಾಟ ಪ್ರಮಾಣ ಶೇ.20ರಷ್ಟು ಹೆಚ್ಚಳವಾಗಿದೆ. ಹಬ್ಬಗಳ ಪರಿಣಾಮ ಪೆಟ್ರೋಲ್, ಡಿಸೇಲ್ ಖರೀದಿ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.