ದಕ್ಷಿಣ ಭಾರತ ನ್ಯೂಸ್ | ಚಿನ್ನ ಕಳ್ಳಸಾಗಣೆ ಮಾಡತ್ತಿದ್ದವರು ಅರೆಸ್ಟ್, ಸಿಎಂಗೆ ಬೆದರಿಕೆ ಮೆಸೇಜ್ ಕಳುಹಿಸಿದವನ ಬಂಧನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

SOUTH INDIA UPDATE | 17 ನವೆಂಬರ್ 2020

ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ

ಚೆನ್ನೈ | ಗುದನಾಳದಲ್ಲಿ ಚಿನ್ನ ಇರಿಸಿಕೊಂಡು ಸಾಗಿಸುತ್ತಿದ್ದ ಐವರು ಪ್ರಯಾಣಿಕರ ಬಂಧನ. ಚೆನ್ನೈ ಏರ್ ಇಂಟೆಲಿಜೆನ್ಸ್ ವಿಭಾಗದಿಂದ ಏರ್‍ಪೋರ್ಟ್‍ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಕಳ್ಳ ಪ್ರಯಾಣಿಕರು. ಅಕ್ರಮವಾಗಿ ಸಾಗಿಸುತ್ತಿದ್ದ 97.7 ಲಕ್ಷ ಮೌಲ್ದಯದ 1.87 ಕೆ.ಜಿ. ಚಿನ್ನ ವಶಕ್ಕೆ.

ಕರೋನ ಲಿಸಿಕೆ ಪರೀಕ್ಷೆ ಮೂರನೆ ಹಂತಕ್ಕೆ

ಹೈದರಾಬಾದ್ | ಭಾರತದಲ್ಲಿ ಮೂರನೆ ಹಂತದ ಪರೀಕ್ಷೆಗೆ ಒಳಗಾಗುತ್ತಿದೆ ಕರೋನ ಲಸಿಕೆ. ಮೂರನೆ ಹಂತದ ಟ್ರಯಲ್‍ಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಒಳಪಡಿಸುತ್ತಿರುವುದಾಗಿ ಭಾರತ್ ಬಯೋಟೆಕ್ ಕಂಪೆನಿ ಹೇಳಿಕೆ.

ಸಿಎಂಗೆ ಬೆದರಿಕೆ ಮೆಸೇಜು, ಹಣಕ್ಕೆ ಬೇಡಿಕೆ

ಗೋವಾ | ಮುಖ್ಯಮಂತ್ರಿ ಮತ್ತು ರಾಜಕೀಯ ಮುಖಂಡರಿಗೆ ಬೆದರಿಕೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ 25 ವರ್ಷ ಯುವಕನ ಬಂಧನ. ಗೋವಾ ಸಿಎಂ ಪ್ರಮೋದ್ ಸವಾಂತ್ ಅವರಿಗೆ ಈತ ಬೆದರಿಕೆ ಸಂದೇಶ ಕಳುಹಿಸಿದ್ದ.

ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ

ಚೆನ್ನೈ | ತಮಿಳುನಾಡಿನಲ್ಲಿ ಮತ್ತೊಂದು ಪಕ್ಷ ರಚನೆಗೆ ಚಿಂತನೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಪುತ್ರ ಅಳಗಿರಿ ಹೊಸ ಪಾರ್ಟಿ ಕಟ್ಟಲು ಯೋಜಿಸಿದ್ದಾರೆ. ಸಹೋದರ ಸ್ಟಾಲಿನ್, ಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ‍್ಯರ್ಥಿ ಆಗಿರುವುದರಿಂದ, ಸ್ಪರ್ಧೆಯೊಡ್ಡಲು ಅಳಗಿರಿ ಯತ್ನ.

ಕೋವಿಡ್ ಆತಂಕದ ನಡುವೆ ಶಬರಿಮಲೈ ಯಾತ್ರೆ ಶುರು

ಶಬರಿಮಲೈ | ಶಬರಿಮಲೈ ಯಾತ್ರೆ ಆರಂಭವಾಗಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment