ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 1 AUGUST 2024 : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಯುವಕನೊಬ್ಬನನ್ನು ಬಂಧಿಸಲಾಗಿದೆ (arrest). ಆತನ ಬಳಿ ಐದು ಸಾವಿರ ರೂ. ಮೌಲ್ಯದ ಗಾಂಜಾ ಮತ್ತು 300 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಲೈವ್.ಕಾಂ : ಕೆಎಸ್ಅರ್ಟಿಸಿ ಬಸ್ ಡಿಪೋದ ಬಳಿ ಶೆಡ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಸಾಗರ ಮೂಲದ ಇಮ್ರಾನ್ ಅಲಿಯಸ್ ಕರಿಯನನ್ನು ಬಂಧಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೆಡ್ ಬಳಿ ಯುವಕ ಅರೆಸ್ಟ್
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹೆಲ್ತ್ ಇನ್ಸ್ಪೆಕ್ಟರ್ ಬೈಕ್ ಕಳ್ಳತನ ಶಿವಮೊಗ್ಗ ಲೈವ್.ಕಾಂ : ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಸಂದೀಪ್ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗದ ಹೊಸಮನೆ 2ನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಜು.24ರಂದು ಬೆಳಗ್ಗೆ ಸಂದೀಪ್ ಅವರು ಮನೆಯಿಂದ ಹೊರಬಂದು ನೋಡಿದಾಗ ಸಿಟಿ 100 ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದ ಸಂದೀಪ್ ಅವರು ಬಳಿಕ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ : ವಿನಾಯಕ ಟಾಕೀಸ್ ಬಳಿ ಇಡ್ಲಿ ಗಾಡಿಯಲ್ಲಿ ಇಡ್ಲಿ ಸೇವಿಸಿ, ಪಾರ್ಸೆಲ್ ಖರೀದಿಸಿ ಹಿಂದಕ್ಕೆ ತಿರುಗುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಮಿಳಘಟ್ಟದ ಸರ್ದಾರ್ ಬೇಗ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಕಳುವಾಗಿದೆ. ಜು.12ರಂದು ಸಂಜೆ ಘಟನೆ ಸಂಭವಿಸಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಡ್ಲಿ ತಿಂದು ತಿರುಗುವಷ್ಟರಲ್ಲಿ ಬೈಕ್ ಇಲ್ಲ