ಶಿವಮೊಗ್ಗದ ನಾಲ್ವರು ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಷ್ಟೆ ಮತ ಹಾಕಲು ಚಾನ್ಸ್, ಉಳಿದ ಮೂವರಿಗಿಲ್ಲ ಅವಕಾಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021

ವಿಧಾನ ಪರಿಷತ್ ಚುನಾವಣೆಗೆ ಶಿವಮೊಗ್ಗದಿಂದ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮತದಾನದ ಹಕ್ಕು ಹೊಂದಿರುವವರು ಒಬ್ಬರು ಮಾತ್ರ.

ADVT JULY NANJAPPA HOSPITAL HOME LAB TESTING

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಆರ್.ಪ್ರಸನ್ನಕುಮಾರ್, ಬಿಜೆಪಿಯಿಂದ ಡಿ.ಎಸ್.ಅರುಣ್, ಜೆಡಿಯು ಪಕ್ಷದಿಂದ ಶಶಿಕುಮಾರ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಅವರು ಕಣದಲ್ಲಿದ್ದಾರೆ.

ನಾಲ್ವರು ಅಭ್ಯರ್ಥಿಗಳ ಪೈಕಿ ಬಿಜೆಪಿಯ ಅಭ್ಯರ್ಥಿ ಡಿ.ಎಸ್.ಅರುಣ್, ಜೆಡಿಯು ಅಭ್ಯರ್ಥಿ ಶಶಿಕುಮಾರ್ ಗೌಡ, ಪಕ್ಷೇತರ ಅಭ್ಯರ್ಥಿ ರವಿ ಅವರಿಗೆ ಮತದಾನದ ಅವಕಾಶವಿಲ್ಲ. ಇವರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಲ್ಲ. ಜನಪ್ರತಿನಿಧಿಗಳಾಗಿ ಆಯ್ಕೆಯು ಆಗಿಲ್ಲ. ಹಾಗಾಗಿ ಇವರು ಅಭ್ಯರ್ಥಿಗಳಾದರೂ ಮತದಾನದಿಂದ ವಂಚಿತವಾಗಿದ್ದಾರೆ.

ಇನ್ನು, ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಅವರಿಗೆ ಮತದಾನಕ್ಕೆ ಅವಕಾಶವಿದೆ. ಹಾಗಾಗಿ ಆರ್.ಪ್ರಸನ್ನ ಕುಮಾರ್ ಅವರು ಮಹಾನಗರ ಪಾಲಿಕೆಯಲ್ಲಿ ಮತದಾನ ಮಾಡಿದ್ದಾರೆ.

shivamogga live subscribe band

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 10, 2021

Leave a Comment