ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜೂನ್ 2020
ಶಿವಮೊಗ್ಗದಲ್ಲಿ ಇವತ್ತು ನಡೆದ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕೋವಿಡ್ ೧೯ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ನಡೆದ ಮೊದಲ ಪರೀಕ್ಷೆ ಇದಾಗಿದೆ.
ಎಷ್ಟು ವಿದ್ಯಾರ್ಥಿಗಳಿದ್ದರು?
ಶಿವಮೊಗ್ಗ ಜಿಲ್ಲೆಯ ೩೩ ಪರೀಕ್ಷಾ ಕೇಂದ್ರದಲ್ಲಿ ಇವತ್ತು ಪರೀಕ್ಷೆ ನಡೆಯಿತು. ಒಟ್ಟು 18,380 ವಿದ್ಯಾರ್ಥಿಗಳು ಪರೀಕ್ಷೆ ನೊಂದಾಯಿಸಿಕೊಂಡಿದ್ದರು. ಆದರೆ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ 18,380 ವಿದ್ಯಾರ್ಥಿಗಳ ಪೈಕಿ 17,842 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. 538 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಹೊರ ಜಿಲ್ಲೆಯ ಎಳು ಮಂದಿ ಆಬ್ಸಂಟ್
ಹೊರ ಜಿಲ್ಲೆಯ 791 ಮಂದಿ ಪರೀಕ್ಷೆ ಬರೆಯಲು ಶಿವಮೊಗ್ಗದಲ್ಲಿ ನೊಂದಾಯಿಸಿಕೊಂಡಿದ್ದರು. ಆದರೆ 784 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಏಳು ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com

LATEST NEWS
- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು












