ಉಚಿತ ವಿದ್ಯುತ್‌, ಮೆಸ್ಕಾಂನಿಂದ ಸೇವಾಸೇತು ಶಿಬಿರ, ಯಾವ್ಯಾವ ಬಡಾವಣೆಯ ಜನ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ: ಕೇಂದ್ರ ಸರ್ಕಾರದ ಪಿ.ಎಂ. ಸೂರ್ಯ ಘರ್ ಮುಫ್ತ್‌ ಬಿಜ್ಲಿ ಯೋಜನೆಯಡಿ ಮನೆಗಳಿಗೆ ಸೌರ ವಿದ್ಯುತ್ ಅಳವಡಿಸಿ ಉಚಿತ ವಿದ್ಯುತ್ ಪಡೆಯಲು ಅನುಕೂಲವಾಗುವಂತೆ ಮೆಸ್ಕಾಂ ವತಿಯಿಂದ ವಿಶೇಷ ಸೇವಾಸೇತು ಶಿಬಿರ ಆಯೋಜಿಸಲಾಗಿದೆ.

ನಗರ ಉಪ ವಿಭಾಗ-3 ವ್ಯಾಪ್ತಿಯಲ್ಲಿ ಅಕ್ಟೋಬರ್ 13 ರಿಂದ ಅಕ್ಟೋಬರ್ 15 ರವರೆಗೆ ನೋಂದಣಿ ಹಾಗೂ ಜಾಗೃತಿ ಶಿಬಿರ ನಡೆಯಲಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ಗುಡ್‌ಲಕ್ ವೃತ್ತದ ಬಳಿ ಇರುವ ಮೆಸ್ಕಾಂ ನಗರ ಉಪ ವಿಭಾಗ-3 ರ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.

Mescom-high-bill-to-consumer

ವಿನೋಬನಗರ, ಗೋಪಾಳಗೌಡ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ, ದೇವರಾಜ ಅರಸು ಬಡಾವಣೆ, ಗಾಡಿಕೊಪ್ಪ, ಸೋಮಿನಕೊಪ್ಪ, ಜೆ.ಹೆಚ್. ಪಟೇಲ್ ಬಡಾವಣೆ ಸೇರಿದಂತೆ ಉಪ ವಿಭಾಗ-3 ರ ವ್ಯಾಪ್ತಿಗೆ ಒಳಪಡುವ ಬಡಾವಣೆಗಳ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.