ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021
ಕರೋನ ಎರಡನೆ ಅಲೆ ಭೀತಿಯ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಸ್ಕ್ ಧರಿಸದೆರಸ್ತೆಗಿಳಿಯುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.
ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ, 1694 ಪ್ರಕರಣ ದಾಖಲಿಸಿ, 2,23,350 ರೂ. ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕೇಸ್?
ಶಿವಮೊಗ್ಗ ತಾಲ್ಲೂಕಿನಲ್ಲಿ 468 ಪ್ರಕರಣಗಳನ್ನು ದಾಖಲಿಸಿ 1,00,750 ರೂ. ದಂಡ ವಿಧಿಸಲಾಗಿದೆ. ಭದ್ರಾವತಿ ತಾಲ್ಲೂಕಿನಲ್ಲಿ 827 ಪ್ರಕರಣಗಳನ್ನು ದಾಖಲಿಸಿ 82,700 ರೂ. ದಂಡ ವಿಧಿಸಲಾಗಿದೆ.
ಸಾಗರ ತಾಲ್ಲೂಕಿನಲ್ಲಿ 83 ಪ್ರಕರಣಗಳನ್ನು ದಾಖಲಿಸಿ 8,300 ರೂ. ದಂಡ. ಶಿಕಾರಿಪುರ ತಾಲ್ಲೂಕಿನಲ್ಲಿ 160 ಪ್ರಕರಣ ದಾಖಲಿಸಿ 16 ಸಾವಿರ ರೂ. ದಂಡ. ಸೊರಬ ತಾಲ್ಲೂಕಿನಲ್ಲಿ 67 ಪ್ರಕರಣಗಳನ್ನು ದಾಖಲಿಸಿ 6,700 ರೂ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 44 ಪ್ರಕರಣಗಳನ್ನು ದಾಖಲಿಸಿ 4,400 ರೂ. ದಂಡ. ಹೊಸನಗರ ತಾಲ್ಲೂಕಿನಲ್ಲಿ 45 ಪ್ರಕರಣ ದಾಖಲಿಸಿ 4,500 ರೂ. ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]