ಜಾನುವಾರುಗಳಿಗೂ ಬಿಸಿಲ ಧಗೆ: ರಕ್ಷಣೆಗೆ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಮಾರ್ಗಸೂಚಿ

ಶಿವಮೊಗ್ಗ: ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ (Heat Wave) ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಜಾನುವಾರುಗಳ ಆರೋಗ್ಯ ಕಾಪಾಡಲು ಪಶುಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.

ಪಶುಪಾಲಕರಿಗೆ ನೀಡಿದ ಸೂಚನೆಗಳೇನು?
  • ನೆರಳಿನ ಆಸರೆ: ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು. ಬದಲಿಗೆ ಮರಗಳ ಕೆಳಗೆ ಅಥವಾ ತಂಪಾದ ನೆರಳಿನ ಪ್ರದೇಶಗಳಲ್ಲಿ ಅವುಗಳನ್ನು ಕಟ್ಟಿಹಾಕಬೇಕು.
  • ಕೊಟ್ಟಿಗೆಯ ತಂಪು: ಕೊಟ್ಟಿಗೆಯ ಮೇಲ್ಛಾವಣಿಯ ತಾಪಮಾನ ಕಡಿಮೆ ಮಾಡಲು ಸುಣ್ಣದ ಲೇಪನ ಮಾಡಬೇಕು ಅಥವಾ ತೆಂಗಿನ ಗರಿಗಳನ್ನು ಹೊದಿಸಬೇಕು.
  • ದೇಹದ ಉಷ್ಣತೆ ನಿಯಂತ್ರಣ: ಮಧ್ಯಾಹ್ನದ ವೇಳೆ ಜಾನುವಾರುಗಳಿಗೆ ಒದ್ದೆಯಾದ ಗೋಣಿ ಚೀಲಗಳನ್ನು ಹೊದಿಸುವುದು ಉತ್ತಮ. ಜಾನುವಾರುಗಳ ಮೈಮೇಲೆ ನೀರನ್ನು ಸಿಂಪಡಿಸುವ ಮೂಲಕ ಅವುಗಳ ದೇಹವನ್ನು ತಂಪಾಗಿರಿಸಬೇಕು.
  • ನೀರು ಮತ್ತು ಆಹಾರ: ಜಾನುವಾರುಗಳಿಗೆ ಕುಡಿಯಲು ಸದಾ ಕಾಲ ಸ್ವಚ್ಛ ಮತ್ತು ತಂಪಾದ ನೀರಿನ ವ್ಯವಸ್ಥೆ ಇರಬೇಕು. ಆಹಾರದಲ್ಲಿ ರಸಮೇವು, ಪೌಷ್ಟಿಕಾಂಶದ ಪೂರಕಗಳನ್ನು ನೀಡಲು ಗಮನ ಹರಿಸಬೇಕು.
  • ಕೀಟಗಳ ನಿಯಂತ್ರಣ: ಕೊಟ್ಟಿಗೆಯಲ್ಲಿ ಸೊಳ್ಳೆ ಮತ್ತು ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಇವತ್ತು ಅಡಿಕೆ ರೇಟ್‌ ಎಷ್ಟಿದೆ? ತೀರ್ಥಹಳ್ಳಿ, ಭದ್ರಾವತಿಯಲ್ಲಿ ಯಾವ್ಯಾವ ಅಡಿಕೆ ಧಾರಣೆ ಏನಿದೆ?

ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಪಶುಪಾಲಕರು ತಮ್ಮ ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಯನ್ನು ಸ್ಥಿರವಾಗಿಟ್ಟುಕೊಳ್ಳಬಹುದು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 6, 2026 at 5:40 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 6, 2026