ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ, ಎಲ್ಲೆಲ್ಲಿ ಆಗ್ತಿದೆ ವರ್ಷಧಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

RAIN NEWS, 3 OCTOBER 2024 : ಜಿಲ್ಲೆಯ ವಿವಿಧೆಡೆ ಸಂಜೆ ಹೊತ್ತಿಗೆ ಮಳೆ ಆರಂಭವಾಗಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಹಲವು ಕಡೆ ಜೋರು ಮಳೆಯಾಗುತ್ತಿದೆ.

ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಶಿವಮೊಗ್ಗ ತಾಲೂಕಿನ ಕೊರಲಹಳ್ಳಿ, ಸಂತೆ ಕಡೂರು, ಬಿದರೆ, ಪಿಳ್ಳಂಗೆರೆ, ಶಿವಮೊಗ್ಗ ನಗರದ ವಿವಿಧೆಡೆ ಮಳೆಯಾಗುತ್ತಿತ್ತು. ಭದ್ರಾವತಿಯ ಬಿಳಕಿ, ತಡಸ, ಕಾಗೆಕೋಡಮಗ್ಗಿ, ಅರಲಹಳ್ಳಿ, ಕುಮಾರನಹಳ್ಳಿ, ನಾಗತಿಬೆಳಗಲು, ಅರೆಬಿಳಚಿ, ದಾಸರಕಲ್ಲಹಳ್ಳಿ, ಎಮ್ಮೆಹಟ್ಟಿ, ಮೈದೊಳಲು, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿ ಭಾಗದಲ್ಲಿ ಮಳೆಯಾಗುತ್ತಿದೆ.

Rain-in-Shimoga-city-night.
File Photo

ತೀರ್ಥಹಳ್ಳಿಯ ತೂದೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಹಾದಿಗಲ್ಲು. ಹೊಸನಗರ ತಾಲೂಕಿನ ಸೋನಲೆ, ಮುಂಬಾರು, ಕೋಡೂರು, ಮೇಲಿನಬೆಸಗೆ, ಹೊಸೂರು (ಸಂಪೆಕಟ್ಟೆ), ಮಾರುತಿಪುರ, ಅರಸಾಳು ಭಾಗಗಳಲ್ಲಿ, ಸೊರಬ ಮತ್ತು ಶಿಕಾರಿಪುರ ತಾಲೂಕಿನ ಕೆಲವು ಕಡೆ ಮಳೆಯಾಗುತ್ತಿರುವ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದರು ತಾಪಮಾನ ತಗ್ಗಿಲ್ಲ. ಮೈ ಕೊರೆಯುವ ಚಳಿ ಇರಬೇಕಿದ್ದ ಸಂದರ್ಭದಲ್ಲಿಯು ಧಗೆ ಇದೆ.

ಇದನ್ನೂ ಓದಿ » ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ಉದ್ಘಾಟನೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment