SHIVAMOGGA LIVE NEWS, 5 DECEMBER 2024
ಶಿವಮೊಗ್ಗ : ಫೆಂಗಲ್ ಚಂಡಮಾರುತದ ಪರಿಣಾಮ ಆರಂಭವಾಗಿದ್ದ ಮಳೆ ಎರಡು ದಿನ ಬಿಡುವು ನೀಡಿತ್ತು. ಈಗ ಪುನಃ ಮಳೆ (Rain) ಆರಂಭವಾಗಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮಳೆ ಶುರುವಾಗಿದೆ.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಜೋರು ಬಿಸಿಲಿತ್ತು. ಸಂಜೆ ಹೊತ್ತಿಗೆ ದಿಢೀರ್ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಶುರುವಾಗಿದೆ.
ಜಿಲ್ಲೆಯ ವಿವಿಧೆಡೆ ಮಳೆ
ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಈ ವರದಿ ಪ್ರಕಟವಾಗುವ ಹೊತ್ತಿಗೆ ಶಿವಮೊಗ್ಗ ತಾಲೂಕಿನ ಸಂತೆ ಕಡೂರು, ಬಿದರೆ, ಹಸೂಡಿ, ಕೂಡ್ಲಿ, ಹಾಡೋನಹಳ್ಳಿ, ಸೂಗೂರು, ಅಬ್ಬಲಗೆರೆ, ರಾಮನಗರ, ಮಲ್ಲಾಪುರದಲ್ಲಿ ಮಳೆಯಾಗುತ್ತಿತ್ತು. ಭದ್ರಾವತಿಯ ಎಮ್ಮೆಹಟ್ಟಿ, ದಾಸರಕಲ್ಲಹಳ್ಳಿ, ನಾಗತಿ ಬೆಳಗಲು, ತಡಸ, ಕಾಗೆಕೊಡಮಗ್ಗಿ, ಅರಳಹಳ್ಳಿ, ಅರಕೆರೆ, ನಿಂಬೆಗೊಂದಿ, ಗುಡುಮಘಟ್ಟ, ಮಾವಿನಕೆರೆ, ಹಿರಿಯೂರು, ಸಿಂಗನಮನೆ ಸುತ್ತಮುತ್ತಲು ಮಳೆಯಾಗುತ್ತಿದೆ.
ತೀರ್ಥಹಳ್ಳಿಯ ಹೊನ್ನೇತಾಳು, ಮೇಘರವಳ್ಳಿ, ಹೊಸಹಳ್ಳಿ, ನೊಣಬೂರು, ತೂದೂರು, ಹೊಸನಗರದ ಕೋಡೂರು, ಹೊಸೂರು ಸಂಪೆಕಟ್ಟೆ, ಸಾಗರದ ಕೋಳರು, ಕಲ್ಮನೆ, ಸಿರಿವಂತೆ, ತ್ಯಾಗರ್ತಿ, ಶಿಕಾರಿಪುರದ ಜಕ್ಕಿನಕೊಪ್ಪ, ಕಾಗಿನಲ್ಲಿ, ಮುದ್ದನಹಳ್ಳಿ, ಮಾರವಳ್ಳಿ, ಬಗನಕಟ್ಟೆ, ಗೊಡ್ಡನಕೊಪ್ಪ, ಸೊರಬದ ಶಿಗ್ಗ, ತತ್ತೂರು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಅಕ್ಕ ಕೆಫೆ ಕ್ಯಾಂಟಿನ್, ಮಹಿಳೆಯರಿಂದ ಅರ್ಜಿ ಆಹ್ವಾನ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200