ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 DECEMBER 2022
ಶಿವಮೊಗ್ಗ : ಜಿಲ್ಲೆಯಲ್ಲಿ ಇನ್ನು ಎರಡು ದಿನ ಮಳೆಯಾಗುವ (rain continues) ಸಂಭವವಿದೆ. ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ರೈತರ ಆತಂಕ ಹೆಚ್ಚಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರಾಜ್ಯದ ಕರಾವಳಿ, ಉತ್ತರ ಒಳನಾಡಿಗಿಂತಲು ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
(rain continues)
ಮೋಡ, ಥಂಡಿಯಿಂದ ಗಢಗಢ
ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಮೋಡ ಮುಸುಕಿದೆ. ಆಗಾಗ ಜೋರು ಮಳೆ ಸುರಿಯುತ್ತಿದೆ. ಇದರ ಜೊತೆಗೆ ಮೈ ಕೊರೆಯುವ ಚಳಿಯು ಇದೆ. ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
(rain continues)
ರೈತರಿಗೆ ಕೈ ಬಂದಿದ್ದು ಬಾಯಿಗಿಲ್ಲ
ಜಿಲ್ಲೆಯಾದ್ಯಂತ ಭತ್ತ, ಮೆಕ್ಕೆ ಜೋಳ, ಅಡಕೆ ಕೊಯ್ಲು ಮತ್ತು ಒಕ್ಕಲು ನಡೆಯುತ್ತಿದೆ. ಮೋಡ, ಮಳೆಯಿಂದಾಗಿ ರೈತರಿಗೆ ಕೈ ಬಂದಿದ್ದು ಬಾಯಿಗಿಲ್ಲ ಅನ್ನುವ ಪರಿಸ್ಥತಿಯಾಗಿದೆ. ಯಂತ್ರ ಬಳಸಿ ಕೊಯ್ಲು ಮಾಡಿಸಿದವರ ಭತ್ತ ಸುರಕ್ಷಿತವಾಗಿದೆ. ಮಳೆಯಲ್ಲಿ ಹುಲ್ಲು ತೊಯ್ದು ಹೋಗಿದೆ. ಕೆಲಸಗಾರರನ್ನು ಬಳಸಿ ಕೊಯ್ಲು ಮಾಡಿಸಿದವರು ಭತ್ತ ಮತ್ತು ಹುಲ್ಲು ಎರಡನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮಳೆಯಿಂದ ನೆಂದಿರುವ ಭತ್ತ, ಹುಲ್ಲನ್ನು ಜಮೀನಿಗಳಲ್ಲಿಯೆ ಒಣಗಿಸಲಾಗಿದೆ. ನಿಂತರ ಮಳೆಗೆ ಗದ್ದೆಗಳು ಕೆಸರುಮಯವಾಗಿದೆ.
ಎಲೆ ಚುಕ್ಕೆ ರೋಗದಿಂದ ಇಳುವರಿ ಕಡಿಮೆಯಾಗಿದೆ. ಈಗ ಕೊಯ್ಲು ಮುಗಿಸಿದವರಿಗೆ ಮಳೆಯಿಂದ ಸಮಸ್ಯೆ ಶುರುವಾಗಿದೆ. ಅಡಕೆಯನ್ನು ಬೇಯಿಸಿ ಒಣಗಿಸಬೇಕು. ಆದರೆ ಬಿಸಿಲು ಇಲ್ಲದಿರುವುದರಿಂದ ಅಡಕೆ ಒಣಗಿಸುವುದೆ ದೊಡ್ಡ ಸಮಸ್ಯೆಯಾಗಿದೆ. ಅಡಕೆ ಬೆಳೆಗಾರರು ಬಿಸಿಲಿಗಾಗಿ ಕಾದು ಕೂತಿದ್ದಾರೆ.
(rain continues)
ಮನೆಯಿಂದ ಹೊರ ಬಾರದ ಜನ
ಮೋಡ ಕವಿದ ವಾತಾವರಣ, ಮಳೆ, ಥಂಡಿಗೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆ ಇತ್ತು. ನಗರದಲ್ಲಿ ಎಂದಿಗಿಂತಲು ಕಡಿಮೆ ಜನ ಸಂಚಾರವಿತ್ತು. ಇದು ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ – ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ನಗರದಲ್ಲಿ ವೀಕೆಂಡ್ ರಜೆ ಮತ್ತು ಸಂಜೆ ವೇಳೆಗೆ ವ್ಯಾಪಾರ, ವಹಿವಾಟು ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಮಳೆ ನಿರಾಸೆ ಮೂಡಿಸಿದೆ. ಮಳೆಯಿಂದಾಗಿ ವ್ಯಾಪಾರ ಕೈ ಕೊಟ್ಟಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ – ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತ, ಮೃತರ ಗುರುತು ಪತ್ತೆ, ಎಲ್ಲರು ದಾವಣಗೆರೆಯವರು
ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾದ್ಯತೆ ಇದೆ. ರೈತರು, ವ್ಯಾಪಾರಿಗಳು, ಜನರನ್ನು ಚಿಂತೆಗೀಡು ಮಾಡಿದೆ.