ಜಿಲ್ಲೆಯಾದ್ಯಂತ ಕಡಿಮೆಯಾಯ್ತು ಮಳೆ, ತುಂಗಾ ನದಿ ನೀರಿನ ಮಟ್ಟ ಇಳಿಕೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE | 8 JULY 2023

SHIMOGA : ಜಿಲ್ಲೆಯಾದ್ಯಂತ ಮಳೆ (Rain) ಪ್ರಮಾಣ ಕ್ಷೀಣಿಸಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಳೆ ಮರೆಯಾಗಿ ಬಿಸಿಲು ಕಾಣಿಸಿಕೊಂಡಿದೆ. ಉಳಿದ ತಾಲೂಕುಗಳಲ್ಲಿಯು ವರುಣನ ವೇಗ ತಗ್ಗಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 35.3 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 8.1 ಮಿ.ಮೀ, ಹೊಸನಗರದಲ್ಲಿ 68.2 ಮಿ.ಮೀ, ಸಾಗರದಲ್ಲಿ 49.1 ಮಿ.ಮೀ, ಶಿಕಾರಿಪುರದಲ್ಲಿ 9.8 ಮಿ.ಮೀ, ಶಿವಮೊಗ್ಗದಲ್ಲಿ 12.8 ಮಿ.ಮೀ, ಸೊರಬದಲ್ಲಿ 23.1 ಮಿ.ಮೀ, ತೀರ್ಥಹಳ್ಳಿಯಲ್ಲಿ 41.9 ಮಿ.ಮೀ. ಮಳೆಯಾಗಿದೆ.

Rain-in-Shimoga-City

ಜಲಾಶಯಗಳ ಒಳ ಹರಿವು ಕುಸಿತ

ಜಿಲ್ಲೆಯಾದ್ಯಂತ ಕೆಲವು ದಿನ ಭಾರಿ ಮಳೆಯಾಗಿತ್ತು (Rain). ಇದರಿಂದ ಜಲಾಶಯಗಳ ಒಳ ಹರಿವು ಏರಿಕೆಯಾಗಿತ್ತು. ಆದರೆ ಮಳೆ ಕುಸಿತದಿಂದಾಗಿ ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿದೆ. ಲಿಂಗನಮಕ್ಕಿ ಡ್ಯಾಂಗೆ 22,157 ಕ್ಯೂಸೆಕ್‌ ಒಳ ಹರಿವು ಇದೆ. ನೀರಿನ ಮಟ್ಟ 1749.35 ಅಡಿಗೆ ತಲುಪಿದೆ. ಭದ್ರಾ ಜಲಾಶಯದ ಒಳ ಹರಿವು 6030 ಕ್ಯೂಸೆಕ್‌ ದಾಖಲಾಗಿದೆ. ನೀರಿನ ಮಟ್ಟ 139.8 ಅಡಿಗೆ ತಲುಪಿದೆ. ಇನ್ನು, ತುಂಗಾ ಜಲಾಶಯಕ್ಕೆ 16,386 ಕ್ಯೂಸೆಕ್‌ ಒಳ ಹರಿವು ಇದ್ದು, 17,149 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

Shimoga-Tunga-river-Yeshwanthapura-Shivamogga-Express-Train-on-railway-bridge.

ಇಳಿದ ನದಿ ಮಟ್ಟ

ತುಂಗಾ ಜಲಾಶಯದಿಂದ ಶುಕ್ರವಾರ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಿದ್ದರಿಂದ ಶಿವಮೊಗ್ಗದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದರಿಂದ ಶನಿವಾರ ಜಲಾಶಯದ ಹೊರ ಹರಿವು ಇಳಿಕೆಯಾಗಿದೆ. ಹಾಗಾಗಿ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಕೋರ್ಪಲಯ್ಯ ಛತ್ರ ಮಂಟಪದ ಅರ್ಧ ಭಾಗದವರೆಗೆ ಮಾತ್ರ ಈಗ ನೀರು ಹರಿಯುತ್ತಿದೆ.

India International Exhibition Shivamogga

ಇದನ್ನೂ ಓದಿ – ಅರ್ಧಕ್ಕರ್ಧ ಶಿವಮೊಗ್ಗ ತಾಲೂಕಿನಲ್ಲಿ ಜು.9ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment