ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜೂನ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಳೆದೊಂದು ವಾರದಿಂದ ನಿರಂತರವಾಗಿದ್ದ ಮಳೆ ನಾಲ್ಕು ದನದಿಂದ ಸಂಪೂರ್ಣ ಕ್ಷಿಣವಾಗಿದೆ. ಮೋಡ ಕವಿದ ವಾತಾವರಣ, ಗುಡುಗು, ಮಳೆ ಇರಬೇಕಿರುವ ಸಮಯದಲ್ಲಿ ಜಲ್ಲೆಯಾದ್ಯಂತ ಬೇಸಿಗೆಯಂತಹ ವಾತಾವರಣವಿದೆ.
ನಾಲ್ಕು ದಿನ ನೆಪಕ್ಕಷ್ಟೆ ಮಳೆ
ಜೂ.19ರವರೆಗೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ ಜೂ.20ರ ಬಳಿಕ ನೆಪಕ್ಕಷ್ಟೆ ಮಳೆಯಾಗಿದೆ. ಜೂ.20ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ 11.14 ಮಿ.ಮೀ, ಜೂ.21ರಂದು 0.29 ಮಿ.ಮೀ, ಜೂ.22ರಂದು 3.57 ಮಿ.ಮೀ, ಜೂ.23ರ ಬೆಳಗಿನ ವರದಿ ಪ್ರಕಾರ 5.91 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳ ವಾಡಿಕೆಯಂತೆ 390 ಮಿ.ಮೀ ಮಳೆಯಾಗಬೇಕು. ಆದರೆ ಈವರೆಗೂ 249.42 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ ತಾಲೂಕು
ಮಳೆ ಪ್ರಮಾಣ ಸಂಪೂರ್ಣ ಕುಸಿದಿದೆ. ಜೂನ್ 20ರಂದು 4.20 ಮಿ.ಮೀ ಮಳೆಯಾಗಿದೆ. ಆದರೆ ಜೂ.21ರಂದು 0 ಮಿ.ಮೀ, ಜೂ.22ರಂದು 0.40 ಮಿ.ಮೀ, ಜೂ.23ರಂದು 1 ಮಿ.ಮೀ ಮಳೆಯಾಗಿದೆ. ಆದರೆ ಜೂ.11ರಿಂದ 19ರವರೆಗೆ ನಿರಂತರ ಮಳೆಯಾಗಿದೆ. ಈ ಅವಧಿಯಲ್ಲಿ ಒಟ್ಟು 80.8 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಜೂನ್ ತಿಂಗಳ ವಾಡಿಕೆ ಮಳೆ 133.10 ಮಿ.ಮೀ ಇದೆ. ಈತನಕ 110.40 ಮಿ.ಮೀ ಮಳೆಯಗಿದೆ.
ಭದ್ರಾವತಿ ತಾಲೂಕು
ಭದ್ರಾವತಿ ತಾಲೂಕಿನಲ್ಲೂ ಮೂರ್ನಾಲ್ಕು ದಿನದಲ್ಲಿ ಮಳೆ ಪ್ರಮಾಣ ಸಂಪೂರ್ಣ ಕುಸಿದಿದೆ. ಜೂ.20ರಂದು 6 ಮಿ.ಮೀ ಮಳೆಯಾಗಿದೆ. ಆದರೆ ಜೂ.21,22 ರಂದು ಮಳೆಯಾಗಿಲ್ಲ. ಜೂ.23ರಂದು 0.40 ಮಿ.ಮೀ ಮಾತ್ರ ಮಳೆಯಾಗಿದೆ. ಈ ತಿಂಗಳ ವಾಡಿಕೆ ಮಳೆ 105 ಮಿ.ಮೀ. ಈತನಕ 98.40 ಮಿ.ಮೀ ಮಳೆಯಾಗಿದೆ.
ತೀರ್ಥಹಳ್ಳಿಯಲ್ಲೂ ಕಡಿಮೆ ಮಳೆ
ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಪ್ರಮಾಣ ಅರ್ಧಕ್ಕರ್ಧದಷ್ಟು ಕಡಿಮೆಯಾಗಿದೆ. ವಾಡಿಕೆ ಮಳೆ 714.50 ಮಿ.ಮೀ. ಆದರೆ ಈವರೆಗೂ ಆಗಿರೋದು ಕೇವಲ 357.80 ಮಿ.ಮೀ. ಜೂ.20ರಂದು 21.80, ಜೂ.21 ರಂದು 0, ಜೂ.22ರಂದು 6.80, ಜೂ.23ರ ವರದಿ ಪ್ರಕಾರ ತಾಲೂಕಿನಲ್ಲಿ 4.20 ಮಿ.ಮೀ ಮಳೆಯಾಗಿದೆ.
ಸಾಗರದಲ್ಲಿ ಗಣನೀಯ ಪ್ರಮಾಣದ ಕುಸಿತ
ತಾಲೂಕಿನಲ್ಲಿ ವಾಡಿಕೆ ಮಳೆ 630 ಮಿ.ಮೀ. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಕೇವಲ 209 ಮಿ.ಮೀ ಮಳೆಯಾಗಿದೆ.
ಶಿಕಾರಿಪುರದಲ್ಲಿ ಸ್ವಲ್ಪ ಸಮಾಧಾನ
ತಾಲೂಕಿನ ವಾಡಿಕೆ ಮಳೆ ಪ್ರಮಾಣ 146 ಮಿ.ಮೀ. ಅದರೆ ಈವರೆಗೂ ಆಗಿರೋದು 130 ಮಿ.ಮೀ. ಮಳೆಯಾಗಿದೆ.
ಸೊರಬದಲ್ಲಿ ಮಳೆ ಕ್ಷೀಣ
ತಾಲೂಕಿನ ವಾಡಿಕೆ ಮಳೆ 324 ಮಿ.ಮೀ. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಕೇವಲ 174.40 ಮಿ.ಮೀ ಮಳೆಯಾಗಿದೆ. ಕಳೆದ ನಾಲ್ಕು ದಿನದಲ್ಲಿ ಜೂ.20ರಂದು 12.40, ಜೂ.21 ರಂದು 0, ಜೂ.22ರಂದು 6.40, ಜೂ.23ರಂದು 1.20 ಮಿ.ಮೀ ಮಳೆಯಾಗಿದೆ.
ಹೊಸನಗರದಲ್ಲಿ ಜೋರಿದೆ ಮಳೆ
ಹೊಸನಗರ ತಾಲೂಕಿನಲ್ಲಿ ಮಳೆ ಪ್ರಮಾಣ ಚೆನ್ನಾಗಿದೆ. ವಾಡಿಕೆ ಮಳೆ 680.10 ಮಿ.ಮೀ. ಈ ಬಾರಿ ಜೂನ್ ತಿಂಗಳಲ್ಲಿ 664.60 ಮಿ.ಮೀ ಮಳೆಯಾಗಿದೆ. ಕಳೆದ ನಾಲ್ಕು ದಿನದಲ್ಲಿ ಮಳೆ ಪ್ರಮಾಣ ಕುಸಿತ ಕಂಡಿದೆ. ಆದರೂ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]