ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯಲ್ಲಿ ಭಾರಿ ಬಿಸಿಲು, ವಿಪರೀತ ಧಗೆಯಿಂದ ಜನರು ಹೈರಾಣಾಗಿದ್ದರು. ಇಂದು ಬೆಳಗಿನ ಜಾವದಿಂದ ಸುರಿಯುತ್ತಿರುವ ಮಳೆಯಿಂದಾಗಿ (RAIN) ಶಿವಮೊಗ್ಗ ಜಿಲ್ಲೆಯಲ್ಲಿ ಇಳೆ ತಂಪಾಗಿದೆ. ತಾಪಮಾನವು ತುಸು ತಗ್ಗಿದೆ.
ಶಿವಮೊಗ್ಗ ಸಿಟಿಯಲ್ಲಿ ಬೆಳಗಿನ ಜಾವದಿಂದ ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ. ಈ ವರದಿ ಪ್ರಕಟವಾಗುವ ಹೊತ್ತಿಗೆ ದಟ್ಟ ಮೋಡ, ಗುಡುಗು ಇದೆ. ನಗರದಲ್ಲಿ ಇವತ್ತು ಮಳೆ (RAIN) ಮುಂದುವರೆಯುವ ಸಾಧ್ಯತೆ ಇದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಮಳೆಯಾಗುತ್ತಿದೆ.
ಎಲ್ಲೆಲ್ಲಿ ಮಳೆಯಾಗುತ್ತಿದೆ?
ಶಿವಮೊಗ್ಗ ತಾಲೂಕು: ಸಂತೆಕಡೂರು, ಬಿದರೆ, ಹಸೂಡಿ, ಪಿಳ್ಳಂಗೆರೆ, ಕೂಡ್ಲಿ, ಅಬ್ಬಲಗೆರೆ, ಶಿವಮೊಗ್ಗ ಸಿಟಿ, ಕಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಆಯನೂರು ಸುತ್ತಮುತ್ತ.

ಭದ್ರಾವತಿ ತಾಲೂಕು: ದಾಸರಕಲ್ಲಹಳ್ಳಿ, ಎಮ್ಮೆಹಟ್ಟಿ, ಮೈದೊಳಲು, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿ, ಅರಕೆರೆ, ಅರೆಬಿಳಚಿ, ನಾಗತಿಬೆಳಗಲು, ಅರಳಹಳ್ಳಿ, ಕುಮಾರನಹಳ್ಳಿ, ದೊಡ್ಡೇರಿ, ಮಾವಿನಕೆರೆ, ಹಿರಿಯೂರು, ಅರಳಿಕೊಪ್ಪ ಸುತ್ತಮುತ್ತ.

ತೀರ್ಥಹಳ್ಳಿ ತಾಲೂಕು: ಭಾಂಡ್ಯ ಕುಕ್ಕೆ, ಹೊದಲ ಅರಳಪುರ, ತ್ರಯಂಬಕಪುರ, ದೇಮ್ಲಾಪುರ, ತೂದುರು ಸುತ್ತಮುತ್ತ.
ಹೊಸನಗರ ತಾಲೂಕು: ಸೋನಲೆ, ಕೋಡೂರು, ಮಾರುತಿಪುರ, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಸುತ್ತಮುತ್ತ.
ಸಾಗರ ತಾಲೂಕು: ಹೊಸೂರು, ಕೋಳೂರು, ಭೀಮನಕೋಣೆ, ಕಲ್ಮನೆ, ಕಾಂಡಿಕೆ, ಭೀಮನೇರಿ, ಮಾಲ್ವೆ, ಕೆಳದಿ, ತ್ಯಾಗರ್ತಿ ಸುತ್ತಮುತ್ತ.
ಶಿಕಾರಿಪುರ ತಾಲೂಕು: ಮುಡುಬಸಿದ್ದಾಪುರ, ಈಸೂರು , ಗಾಮ, ಮುದ್ದನಹಳ್ಳಿ, ಜಕ್ಕಿನಕೊಪ್ಪ, ಕಾಗಿನಲ್ಲಿ, ಬಗನಕಟ್ಟೆ, ಮತ್ತಿಕೋಟೆ, ಹಿರೆಜಂಬೂರು, ಬಳ್ಳಿಗಾವಿ, ತಾಳಗುಂದ, ನರಸಾಪುರ, ಇನಾಂ ಅಗ್ರಹಾರ ಮುಚಡಿ, ಹಾರಿಗಿ, ತಾಳಗುಂದ ಸುತ್ತಮುತ್ತ.
ಸೊರಬ ತಾಲೂಕು: ಇಂಡುವಳ್ಳಿ, ಶಿಗ್ಗಾ, ಹೆಗ್ಗೋಡು, ಹೊಸಬಾಳೆ, ಮುಟುಗುಪ್ಪೆ, ಹಳೆಸೊರಬ, ಉದ್ರಿ, ತತ್ತೂರು, ತಲ್ಲೂರು, ಕುಬಟೂರು, ದೊಡ್ಡಿಕೊಪ್ಪ, ಅಗಸನಹಳ್ಳಿ, ಗೆಂಡ್ಲಾ, ತವನಂದಿ, ಗುಡುವಿ, ನ್ಯಾರ್ಸಿ, ಬೆನ್ನೂರು ಸುತ್ತಮುತ್ತ.
ಇದನ್ನೂ ಓದಿ » KSRTC ಬಸ್ ಹತ್ತಿ ಟಿಕೆಟ್ ಮಾಡಿಸಲು ಜೇಬಿಗೆ ಕೈ ಹಾಕಿದ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಶಾಕ್, ಆಗಿದ್ದೇನು?

LATEST NEWS
- ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್ಗೆ ಕಾದಿತ್ತು ಶಾಕ್, ಆಗಿದ್ದೇನು?

- ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್ ರಚನೆ, ಯಾರಿಗೆ ಯಾವ ಜವಾಬ್ದಾರಿ?

- ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

- ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

- ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

About The Editor
ನಿತಿನ್ ಆರ್.ಕೈದೊಟ್ಲು
















ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕಾಮೆಂಟ್ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?