ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAIN NEWS : ಜಿಲ್ಲೆಯ ವಿವಿಧೆಡೆ ಇವತ್ತೂ ಮಳೆಯಾಗಿದೆ. ಇದರಿಂದ ತಾಪಮಾನ ಇಳಿಕೆಯಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ತಾಲೂಕುಗಳಲ್ಲಿ ಮಳೆಯಾಗಿದೆ.
ಎಲ್ಲೆಲ್ಲಿ ಮಳೆಯಾಗಿದೆ?
ಶಿವಮೊಗ್ಗ ತಾಲೂಕಿನಲ್ಲಿ ಮಳೆ
ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಆಯನೂರು ಬಳಿ ಮರ ಬುಡಮೇಲಾಗಿ ಹೆದ್ದಾರಿಗೆ ಉರುಳಿತ್ತು. ಇದರಿಂದ ವಾಹನ ಸಂಚಾರ ವ್ಯತ್ಯಯವಾಗಿತ್ತು. ಇನ್ನು ಆಯನೂರು ಕೋಟೆ ಬಳಿ ಮೇಯಲು ಬಿಟ್ಟಿದ್ದ 18 ಕುರಿಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ. ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ಮಾಲೀಕ ಜಾಕೀರ್ ಹುಸೇನ್ ತಿಳಿಸಿದ್ದಾರೆ. ತಾಲೂಕಿನ ಕುಂಸಿ, ಆಯನೂರು, ಶಿವಮೊಗ್ಗ ಪಟ್ಟದ ವಿವಿಧೆಡೆ ಮಳೆಯಾಗಿದೆ.
ತೀರ್ಥಹಳ್ಳಿ, ಶಿಕಾರಿಪುರದಲ್ಲೂ ಮಳೆ
ಇನ್ನೊಂದೆಡೆ ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನ ವಿವಿಧೆಡೆಯು ಮಳೆಯಾದ ವರದಿಯಾಗಿದೆ. ಇದರಿಂದ ಈ ಭಾಗದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಗ್ರಾಮದಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಇನ್ನೊಂದೆಡೆ ಮಳೆಯಾಗಿದ್ದರಿಂದ ಪುನೇದಹಳ್ಳಿಯಲ್ಲಿ ರೈತ ಅರುಣ್ ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್ ಆಗಿದೆ.
ತಾಪಮಾನ ಭಾರಿ ಇಳಿಕೆ
ಕಳೆದ ಕೆಲವು ದಿನದಿಂದ ಜಿಲ್ಲೆಯಲ್ಲಿ ತಾಪಮಾನ ಭಾರಿ ಏರಿಕೆಯಾಗಿತ್ತು. 40 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ತಲುಪಿತ್ತು. ಇದರಿಂದ ಜನರು ಕಂಗೆಟ್ಟಿದ್ದರು. ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದರಿಂದ ತಾಪಮಾನ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ಶನಿವಾರವು ಜಿಲ್ಲೆಯ ವಿವಿಧೆಡೆ ಮಳೆಯಾಗುವ ಸಂಭವವಿದೆ. ಆ ಬಳಿಕ ಮತ್ತೆ ಉಷ್ಣಾಂಶ ಏರಿಕೆಯಾಗುವ ಆತಂಕವಿದೆ.
ಇದನ್ನೂ ಓದಿ – ಪತ್ನಿಗೆ ಸಾಲ ನೀಡಿದ ಈಶ್ವರಪ್ಪ, ಎಲ್ಲೆಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ? ನಗದು, ಚಿನ್ನಾಭರಣ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್