ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

Published On : ಜುಲೈ 5, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE | 5 JULY 2023

SHIMOGA : ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 33.9 ಮಿ.ಮೀ ಮಳೆಯಾಗಿದೆ (Rain Report). ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.

night-rain-in-shimoga

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

ಭದ್ರಾವತಿಯಲ್ಲಿ 8.5 ಮಿ.ಮೀ, ಹೊಸನಗರದಲ್ಲಿ 53.2 ಮಿ.ಮೀ, ಸಾಗರದಲ್ಲಿ 57.1 ಮಿ.ಮೀ, ಶಿಕಾರಿಪುರದಲ್ಲಿ 10.6 ಮಿ.ಮೀ, ಶಿವಮೊಗ್ಗದಲ್ಲಿ 10.5 ಮಿ.ಮೀ, ಸೊರಬದಲ್ಲಿ 15.2 ಮಿ.ಮೀ, ತೀರ್ಥಹಳ್ಳಿಯಲ್ಲಿ 44.8 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ – ಗಾಜನೂರಿನ ತುಂಗಾ ಡ್ಯಾಂ ಭರ್ತಿ, ಸಂಜೆಯೊಳಗೆ ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ?

ಜಿಲ್ಲೆಯಾದ್ಯಂತ ಮುಂದುವರೆದ ಮಳೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಜೋರಾಗಿ ವರ್ಷಧಾರೆಯಾಗುತ್ತಿದೆ. ಸಾಗರದ ತ್ಯಾಗರ್ತಿ, ಹಿರೇಬಿಲಗುಂಜಿ, ಭೀಮನಕೋಣೆ, ಕಾಂಡಿಕೆ, ಶಿರವಂತೆ, ಭೀಮನಾರಿ, ಮಾಸೂರು, ಸೊರಬದ ದೂಗೂರು, ಇಂಡುವಳ್ಳಿ, ಮುಟುಗುಪ್ಪೆ, ಗುಡುವಿ, ನ್ಯಾರ್ಸಿ, ಬೆನ್ನೂರು, ಹರೀಶಿ, ದ್ಯಾವನಹಳ್ಳಿ, ಶಿಕಾರಿಪುರದ ಮಡುಬಸಿದ್ದಾಪುರ, ಸಾಲೂರು, ಇಂಡುವಳ್ಳಿ, ಹಿರೇಜಂಬೂರು, ತಡಗಣಿ, ಹೊಸನಗರದ ಸುಳಗೋಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಚದುರಿದ ಹಾಗೆ ಮಳೆ ಸುರಿಯುತ್ತಿದೆ.

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಜುಲೈ 5, 2023

Leave a Comment