SHIVAMOGGA LIVE NEWS, 9 DECEMBER 2024
ಶಿವಮೊಗ್ಗ : ಜಿಲ್ಲೆಯಲ್ಲಿ ಮತ್ತೆ ಮಳೆ (RAIN) ಆರಂಭವಾಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ರಾತ್ರಿಯಿಂದ ವಿವಿಧೆಡೆ ಮಳೆಯಾಗಿದೆ.
ಶಿವಮೊಗ್ಗ ನಗರದ ಹಲವು ಕಡೆ ಕಳೆದ ರಾತ್ರಿ ಮಳೆಯಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಬಿಸಿಲು ಕಾಣಿಸಿಕೊಂಡಿದ್ದು ಜನರು ನಿಟ್ಟುಸಿರು ಬಿಡುವಂತಾಯಿತು.
ಜಿಲ್ಲೆಯ ಹಲವೆಡೆ ಮಳೆ
ಇನ್ನು, ಜಿಲ್ಲೆಯ ಹಲವು ಕಡೆ ರಾತ್ರಿ ಮಳೆಯಾಗಿದೆ. ಬೆಳಗ್ಗೆ ಮೋಡ ಕವಿದ ವಾತಾವರಣ ಮತ್ತು ಹಲವೆಡೆ ಸಾಧಾರಣ ಮಳೆಯಾಗಿರುವ ವರದಿಯಾಗಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ. ಭತ್ತ, ಜೋಳ, ಅಡಿಕೆ ಕೊಯ್ಲು ಮಾಡಿದವರು ಬೆಳೆ ಹಾನಿಯ ಆತಂಕದಲ್ಲಿದ್ದಾರೆ.
ತೂದೂರಿನಲ್ಲಿ ಅತ್ಯಧಿಕ ಮಳೆ
ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ ತಾಲೂಕಿನ ತೂದೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. ಇಂದು ಬೆಳಗ್ಗೆ 8.30ರ ವರದಿ ಪ್ರಕಾರ ತೂದೂರಿನಲ್ಲಿ 8.5 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಇಂದೂ ಮಳೆಯಾದ ವರದಿಯಾಗಿದೆ.
ತಾಲೂಕುವಾರು ಮಳೆ ರಿಪೋರ್ಟ್
ಡಿ.8ರಂದು ಬೆಳಗ್ಗೆ 8.30ರಿಂದ ಡಿ.9ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 0.3 ಮಿ.ಮೀ ಮಳೆಯಾಗಿದೆ. ಭದ್ರಾವತಿ 0.6 ಮಿ.ಮೀ, ಶಿಕಾರಿಪುರದಲ್ಲಿ 0.1 ಮಿ.ಮೀ, ಶಿವಮೊಗ್ಗದಲ್ಲಿ 0.6 ಮಿ.ಮೀ, ಸೊರಬದಲ್ಲಿ 0.1 ಮಿ.ಮೀ, ತೀರ್ಥಹಳ್ಳಿ 0.8 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಕಿ, ಅಣಕು ಪ್ರದರ್ಶನ, ಹೇಗಿತ್ತು?