ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗ್ಗೆಯಿಂದಲೇ ದಟ್ಟ ಮೋಡ, ಮಳೆ

ಶಿವಮೊಗ್ಗ: ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆಯಿಂದ ಭಾರಿ ಮಳೆಯಾಗುತ್ತಿದೆ (Heavy rain). ಶಿವಮೊಗ್ಗ ಜಿಲ್ಲೆಯಲ್ಲಿಯು ದಟ್ಟ ಮೋಡ ಆವರಿಸಿದ್ದು ಇಂದು ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದೆ.

ಇಂದು ಬೆಳಗ್ಗೆ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಮಳೆಯಾಗಿದೆ. ಭದ್ರಾವತಿಯ ಮಾವಿನಕೆರೆ, ಹಿರಿಯೂರು, ನಾಗತಿಬೆಳಗಲು, ದಾಸರಕಲ್ಲಹಳ್ಳಿ, ಆಗರದಹಳ್ಳಿ, ನಿಂಬೆಗೊಂದಿ ಸುತ್ತಾಮುತ್ತಾ ಉತ್ತಮ ಮಳೆಯಾಗಿದೆ (Good rainfall).

rain-in-shimoga-city-near-NCC-Office.

ಶಿವಮೊಗ್ಗದಲ್ಲಿಯು ಬೆಳಗ್ಗೆಯಿಂದ ಮಳೆ

ಶಿವಮೊಗ್ಗ ತಾಲೂಕಿನ ಕೂಡ್ಲಿ, ಅಬ್ಬಲಗೆರೆ, ಕುಂಚೇನಹಳ್ಳಿ, ಕೊನಗವಳ್ಳಿ, ಸಂತೆಕಡೂರು, ಶಿವಮೊಗ್ಗ ಸಿಟಿಯ ವಿವಿಧೆಡೆ ಜೋರು ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿ ಭಾಗದ ಹಲವೆಡೆಯು ಮಳೆಯಾದ ವರದಿಯಾಗಿದೆ (Reported).

ರಾಜ್ಯದ ವಿವಿಧೆಡೆ ಯಲ್ಲೋ ಅಲರ್ಟ್‌

ಪೂರ್ವ ಮುಂಗಾರು ಮಾರುತಗಳ (Pre-monsoon winds) ತೀವ್ರತೆ ಹೆಚ್ಚಾಗಿರುವುದರಿಂದ ರಾಜ್ಯದ ವಿವಿಧೆಡೆ ಮೇ 25ರವರೆಗೆ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather department) ತಿಳಿಸಿದೆ. ಅದರಂತೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ (Strong winds) ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಿಗೆ ಇಂದು ಯಲ್ಲೋ ಅಲರ್ಟ್‌ (Yellow alert) ಘೋಷಿಸಲಾಗಿದೆ.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp