ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ತುಸು ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 13.71 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಆಗಸ್ಟ್ 23ರ ಬೆಳಿಗ್ಗೆ 8:30 ರಿಂದ ಆಗಸ್ಟ್ 24ರ ಬೆಳಿಗ್ಗೆ 8:30ರವರೆಗೆ ತೀರ್ಥಹಳ್ಳಿಯಲ್ಲಿ 26.70 ಮಿಲಿ ಮೀಟರ್, ಸಾಗರದಲ್ಲಿ 25.80 ಮಿ.ಮೀ, ಹೊಸನಗರದಲ್ಲಿ 22.60 ಮಿ.ಮೀ, ಶಿವಮೊಗ್ಗದಲ್ಲಿ 4.90 ಮಿ.ಮೀ, ಭದ್ರಾವತಿಯಲ್ಲಿ 3.90 ಮಿ.ಮೀ, ಶಿಕಾರಿಪುರದಲ್ಲಿ 5.80 ಮಿ.ಮೀ ಮತ್ತು ಸೊರಬದಲ್ಲಿ 6.30 ಮಿ.ಮೀ ಮಳೆಯಾಗಿದೆ.

ಇನ್ನು ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 344.27 ಮಿ.ಮೀ ಮಳೆಯಾಗಿದ್ದು, ವಾಡಿಕೆಯಂತೆ 404.71 ಮಿ.ಮೀ ಮಳೆ ಬೀಳಬೇಕಿತ್ತು ಎಂದು ಜಿಲ್ಲಾಡಳಿತದ ವರದಿ ತಿಳಿಸಲಾಗಿದೆ.