SHIVAMOGGA LIVE | 21 JULY 2023
SHIMOGA : ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಹೆಚ್ಚಳವಾಗಿದೆ. ಕೆರೆ ಕೊಳ್ಳಗಳು, ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಈ ನಡುವೆ ವಿವಿಧೆಡೆ ಮಳೆಯಿಂದ ಹಾನಿ ಸಂಭವಿಸಿದೆ. ಜೋರು ಮಳೆಯ ಹಿನ್ನೆಲೆ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ತೀರ್ಥಹಳ್ಳಿ, ಸಾಗರ, ಹೊಸನಗರ ಮತ್ತು ಸೊರಬ ತಾಲೂಕಿನ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶಗಳ ಪೈಕಿ ಹೊಸನಗರದ ಸೋನಲೆ ಸೇರಿದೆ.
ರಾತ್ರಿ ಅಬ್ಬರಿಸಿದ ವರುಣ
ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಮಳೆ ಅಬ್ಬರ ಜೋರಾಗಿತ್ತು. ತೀರ್ಥಹಳ್ಳಿಯ ಹೊಸಹಳ್ಳಿ, ನೆರಟೂರು, ಕುಡುಮಲ್ಲಿಗೆ, ತ್ರಯಂಬಕಪುರ, ದೇಮ್ಲಾಪುರ, ಹಾದಿಗಲ್ಲು, ನೊಣಬೂರು, ಆರಗ, ಬಿದರಗೋಡು, ತೀರ್ಥ ಮತ್ತೂರು, ಮಾಳೂರು, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, ಹೊಸನಗರದ ಸೋನಲೆ, ತ್ರಿಣಿವೆ, ನಗರ, ಹೊಸೂರು ಸಂಪೆಕಟ್ಟೆ, ಅಮೃತ, ಮುಂಬಾರು, ಮೇಲಿನ ಬೆಸಿಗೆ, ಸಾಗರದ ಕಾಂಡಿಕೆ, ಸಿರಿವಂತೆ, ಹಿರೆಬಿಲಗುಂಜಿ, ತ್ಯಾಗರ್ತಿ, ಭೀಮನೇರಿ, ಕಾನ್ಲೆ, ಸೊರಬದ ಹರೀಶಿ, ಹೊಸಬಾಳೆ, ತಲ್ಲೂರು ಭಾಗದಲ್ಲಿ ಮಳೆ ಜೋರಿತ್ತು ಎಂದು ತಿಳಿದು ಬಂದಿದೆ.
PHOTO : ಸೊರಬ ತಾಲೂಕು ಹಾಲಗಳಲೆ ಸಮೀಪ ಧರೆಗುರುಳಿದ ಮರ, ತುಂಡಾದ ವಿದ್ಯುತ್ ಕಂಬ
ಕೆರೆ, ಕೊಳ್ಳ, ಜಲಾಶಯದ ಮಟ್ಟ ಹೆಚ್ಚಳ
ಆರಂಭದಲ್ಲಿ ಮುಂಗಾರು ನೀರಸವಾಗಿದ್ದರಿಂದ ಈ ಬಾರಿ ಕೆರೆ, ಕೊಳ್ಳ, ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ಮೂಡಿತ್ತು. ಆದರೆ ಈ ವಾರದಲ್ಲಿ ಮಳೆ ಬಿರುಸು ಪಡೆದಿದ್ದು, ಕೆರೆ, ಕೊಳ್ಳ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರಿಕೆಯಾಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ತುಂಗಾ, ಭದ್ರಾ ಜಲಾಶಯಗಳಿಗೆ ನೀರಿನ ಒಳ ಹರಿವು ಏರಿಕೆಯಾಗುತ್ತಿರುವುದು ಬಳ್ಳಾರಿ, ರಾಯಚೂರು, ತೆಲಂಗಾಣ ರಾಜ್ಯದ ರೈತರು ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.
ಇದನ್ನೂ ಓದಿ – ತುಂಗಾ ಡ್ಯಾಂನ ಗೇಟ್‌ಗಳು ಮತ್ತೆ ಓಪನ್, ನಿನ್ನೆ ಎಲ್ಲ ಗೇಟ್ ಮೇಲೆತ್ತಲಾಗಿತ್ತು, ಇವತ್ತು ಹೊರ ಹರಿವು ಎಷ್ಟಿದೆ?
ಅಲ್ಲಲ್ಲಿ ಮಳೆ ಹಾನಿ, ಶಾಲೆಗೆ ರಜೆ
ಜೋರು ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ವಿವಿಧೆಡೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ತುಂಡಾಗಿ ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮನೆಗಳ ಗೋಡೆ ಕುಸಿತ, ಛಾವಣಿ ಹಾನಿ, ಅಲ್ಲಲ್ಲಿ ನೀರು ನಿಂತಿರುವ ಕುರಿತು ವರದಿಯಾಗಿದೆ. ಇನ್ನು ಮಳೆ ಹೆಚ್ಚಾದರೆ ಶಾಲೆಗಳಿಗೆ ರಾಜೆ ಘೋಷಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಸ್ಥಳೀಯ ಮುಖಂಡರಿಗೆ ವಹಿಸಲಾಗಿದೆ. ಈ ಹಿನ್ನೆಲೆ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದಷ್ಟು ಮಳೆಯಾದರೆ ಸ್ಥಳೀಯವಾಗಿ ನಿರ್ಧಾರ ಕೈಗೊಂಡು ವಿವಿಧೆಡೆ ರಜೆ ಘೋಷಿಸಲಾಗಿದೆ.
ಮಳೆ ಉತ್ತಮವಾಗಿದ್ದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಬಿತ್ತನೆ ಕಾರ್ಯ ಜೋರಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200