ಮಳೆ ವರದಿ: ಮಳೆ ನಕ್ಷತ್ರ ಬದಲಾದರು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಇಲ್ಲವಾಗಿದೆ. ಇಂದಿನಿಂದ ಆರಿದ್ರಾ ಮಳೆ ಆರಂಭವಾಗಿದೆ. ಆದರೆ ಮಳೆ ಬದಲು ಬಿಸಿಲಿನ ಅಬ್ಬರ ಜೋರಿದೆ. ಇನ್ನು, ಜೂನ್ 21ರ ಬೆಳಗ್ಗೆ 8:30 ರಿಂದ ಜೂನ್ 22ರ ಬೆಳಗ್ಗೆ 8:30ರವರೆಗೆ ಜಿಲ್ಲೆಯಲ್ಲಿ ಸರಾಸರಿ 23.70 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಸಾಗರದಲ್ಲಿ ಜೋರು ಮಳೆ
ಕಳೆದ 24 ಗಂಟೆಯಲ್ಲಿ ಸಾಗರ ತಾಲೂಕಿನಲ್ಲಿ 13.9 ಮಿ.ಮೀ ಮಳೆ ದಾಖಲಾಗಿದೆ. ಶಿಕಾರಿಪುರ ತಾಲೂಕಿನಲ್ಲಿ ಅತ್ಯಂತ ಕನಿಷ್ಠ 0.10 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 3.50 ಮಿ.ಮೀ, ತೀರ್ಥಹಳ್ಳಿಯಲ್ಲಿ 1.20 ಮಿ.ಮೀ, ಸೊರಬದಲ್ಲಿ 2.40 ಮಿ.ಮೀ ಹಾಗೂ ಹೊಸನಗರ ತಾಲೂಕಿನಲ್ಲಿ 2.20 ಮಿ.ಮೀ ಮಳೆಯಾಗಿದೆ. ಶಿವಮೊಗ್ಗದಲ್ಲಿ 0.40 ಮಿ.ಮೀ ನಷ್ಟು ಮಳೆ ಬಿದ್ದಿದೆ.

ಜೂನ್ ತಿಂಗಳ ಆರಂಭದಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಒಟ್ಟು 560.20 ಮಿ.ಮೀ ನಷ್ಟು ಮಳೆಯಾಗಿದೆ. ಈ ಪೈಕಿ ಸಾಗರ ತಾಲೂಕಿನ್ಲಲಿ 167.30 ಮಿ.ಮೀ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ 135.40 ಮಿ.ಮೀ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ 89.70 ಮಿ.ಮೀ ಒಟ್ಟು ಮಳೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ 50.30 ಮಿ.ಮೀ, ಸೊರಬದಲ್ಲಿ 52 ಮಿ.ಮೀ, ಶಿಕಾರಿಪುರದಲ್ಲಿ 40.70 ಮಿ.ಮೀ ಹಾಗೂ ಭದ್ರಾವತಿಯಲ್ಲಿ 24.80 ಮಿ.ಮೀ ನಷ್ಟು ಒಟ್ಟು ಮಳೆ ಜೂನ್ ತಿಂಗಳಲ್ಲಿ ಇದುವರೆಗೆ ಸುರಿದಿದೆ.
