ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಅರ್ಧ ದಿನ ಲಾಕ್ ಡೌನ್, ಏನಿರುತ್ತೆ? ಏನಿರಲ್ಲ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ ಜಿಲ್ಲೆಯಾದ್ಯಂತ ನಾಳೆಯಿಂದಲೇ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದೆ. ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೊನ ಲಾಕ್ ಡೌನ್ ನಿಯಮ ಘೋಷಿಸಿದರು.

107095610 909433912869853 8511875037471527700 o.jpg? nc cat=110& nc sid=110474& nc ohc=2c5Rp1JHkF0AX9 TF6R& nc ht=scontent.fblr1 5

ಹೊಸ ಲಾಕ್ ಡೌನ್ ನಿಯಮವೇನು?

ಜುಲೈ 16ರಿಂದ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ, ವಹಿವಾಟಿಗೆ ಅವಕಾಶವಿದೆ. ಮಧ್ಯಾಹ್ನ 2 ಗಂಟೆ ಬಳಿಕ ಜಿಲ್ಲೆಯಾದ್ಯಂತ ಲಾಕ್ ಡೌನ್ ಆಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ.

https://www.facebook.com/liveshivamogga/videos/314006596450123/?t=0

ಏನಿರುತ್ತೆ? ಏನಿರಲ್ಲ?

ಪ್ರತಿದಿನ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಎಲ್ಲ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಇದೆ. ಮಧ್ಯಾಹ್ನ 2 ಗಂಟೆ ಬಳಿಕ ಎಲ್ಲವು ಬಂದ್ ಆಗಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಪೆಟ್ರೋಲ್ ಬಂಕ್, ಮದ್ಯದ ಅಂಗಡಿಗಳು ಸೇರಿದಂತೆ ಎಲ್ಲ ವ್ಯವಹಾರಗಳು ಮದ್ಯಾಹ್ನ 2 ಗಂಟೆಗೆ ಬಂದ್ ಆಗಲಿದೆ.

ಫ್ಯಾಕ್ಟರಿಗಳಿಗೆ ಎರಡು ಶಿಫ್ಟ್

ಲಾಕ್ ಡೌನ್ ಅವಧಿಯಲ್ಲೂ ಕಾರ್ಖಾನೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕಾರ್ಖಾನೆಗೆ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ಪಾಸ್‍ಗಳನ್ನು ನೀಡಲಾಗುತ್ತದೆ. ಪಾಸ್ ಇದ್ದವರಿಗಷ್ಟೆ ರಸ್ತೆಗಿಳಿಯಲು ಅವಕಾಶ ಕಲ್ಪಿಸಲಾಗುತ್ತದೆ. ಪಾಸ್ ಪಡೆದುಕೊಳ್ಳುವ ಜವಾಬ್ದಾರಿ ಕಾರ್ಖಾನೆ ಮಾಲೀಕರಿಗೆ ಸೇರಿದ್ದು ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.

107872179 1166720377022714 5854831073258713264 o.jpg? nc cat=110& nc sid=110474& nc ohc=WY0aPpbHa6kAX G872E& nc ht=scontent.fblr11 1

ಕೃಷಿ ಚಟುವಟಿಕೆಗೆ ಓಕೆ

ಜಿಲ್ಲೆಯಾದ್ಯಂತ ಮಧ್ಯಾಹ್ನದಿಂದ ಲಾಕ್ ಡೌನ್ ಇದ್ದರೂ, ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಗ್ರಾಮೀಣ ಪ್ರದೆಶದಲ್ಲಿ ಕೃಷಿ ಚಟುವಟಿಕೆಯನ್ನು ನಡೆಸಲು ಅಕವಾಶವಿದೆ.

ಮದುವೆಗೆ ರೂಲ್ಸ್, ಹಬ್ಬಗಳು ಕ್ಯಾನ್ಸಲ್

ಕೋವಿಡ್ ಸಂದರ್ಭದಲ್ಲಿ ಮದುವೆಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. 50 ಜನಕ್ಕಿಂತಲೂ ಹೆಚ್ಚಿನ ಜನರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇನ್ನು, ಯಾವುದೇ ಧರ್ಮದ ಹಬ್ಬಗಳನ್ನು ಸಾಮೂಹಿಕವಾಗಿ ನಡೆಸಲು ಅವಕಾಶವಿಲ್ಲ. ತಮ್ಮ ಮನೆಗಳಲ್ಲಷ್ಟೆ ಹಬ್ಬ ಆಚರಿಸಲು ಅವಕಾಶ ಕಲ್ಪಿಸಲಾಗಿದೆ.

ಪೊಲೀಸರಿಗೆ ಪೂರ್ಣ ಅಧಿಕಾರ

ಗುಂಪು ಸೇರುವುದು, ಅನಗತ್ಯವಾಗಿ ಓಡಾಡುವವುದನ್ನು ತಡೆಯುವ ಸಲುವಾಗಿ ಪೊಲೀಸ್ ಇಲಾಖೆಗೆ ಪೂರ್ಣ ಅಧಿಕಾರ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮಾಸ್ಕ್ ಧರಿಸದೆ ಬಂದವರಿಗೆ 200 ರೂ. ದಂಡ ಮತ್ತು ಇತರೆ ದಂಡಗಳನ್ನು ಪೊಲೀಸ್ ಇಲಾಖೆ ನಿರ್ಧರಿಸಲಿದೆ ಎಂದರು.

109819533 909888792824365 619008112265166121 o.jpg? nc cat=101& nc sid=110474& nc ohc=oMLDyCMkEl0AX aAg2T& nc ht=scontent.fblr1 4

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment