ಮಾರಿಕಾಂಬ ದೇಗುಲದ ವಿಶೇಷ
ದೇವಾಲಯದಲ್ಲಿ ಮೂಲಗದ್ದುಗೆ ಹಿಂಭಾಗ ಕೃಷ್ಣ ಶಿಲೆಯಿಂದ ಮಾರಿಕಾಂಬೆಯ ಮೂರ್ತಿ ನಿರ್ಮಿಸಲಾಗಿದೆ. ಒಳಭಾಗದಲ್ಲಿ ನವದುರ್ಗೆಯರ ವಿಗ್ರಹಗಳಿವೆ. ಶ್ರೀಲಕ್ಷ್ಮಿ, ಚಂಡಿಕಾ ದುರ್ಗಾ ಮಾತೆ, ಆರ್ಯ ದುರ್ಗಾ ಮಾತೆ, ವಾಗೇಶ್ವರಿ ಮಾತೆ, ಆದಿಶಕ್ತಿ ಮಾತೆ, ಕುಮಾರಿ ದುರ್ಗಾದೇವಿ, ಭಗವತಿ ಮಾತೆ, ಶ್ರೀ ದುರ್ಗಾ ಮಾತೆ ಮತ್ತು ಶಾರದಾ ಮಾತೆಯರ ವಿಗ್ರಹಗಳಿವೆ. ದೇವಾಲಯದ ಮುಂಭಾಗ ಕರಿಬಾನಿ ಹಾಗೂ ಮಾತಂಗಮ್ಮ ಗುಡಿಗಳಿವೆ. ದೇವಸ್ಥಾನದ ಎದುರಿನ ಅರಳಿಮರದ ಮುಂದಿರುವ ದುಂಡು ಕಲ್ಲುಗಳು ಕಾರ್ಯಸಿದ್ಧಿಯ ಪ್ರಶ್ನೆಗಳಿಗೆ ಉತ್ತರ ನೀಡಲಿವೆ ಎಂಬ ನಂಬಿಕೆ ಇದೆ. ಮನಸಿನಲ್ಲಿ ಪ್ರಶ್ನೆ ಮಾಡಿಕೊಂಡು ಕಲ್ಲುಗಳನ್ನು ಎತ್ತಿದಾಗ ಅದು ಮೇಲೆ ಬಂದರೆ ಕಾರ್ಯಸಿದ್ಧಿಯಾಗಲಿದೆ ಎಂಬ ನಂಬಿಕೆ ಇದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






