ಶಿವಮೊಗ್ಗ ನಗರದಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144ರ ನಿಷೇಧಾಜ್ಞೆ ಅಂತ್ಯ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022

ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಿಆರ್’ಪಿಸಿ ಸೆಕ್ಷನ್ 144 ಅನ್ವಯ ವಿಧಿಸಲಾಗಿದ್ದ ನಿಷೇಧಾಜ್ಞೆ ಅಂತ್ಯಗೊಂಡಿದೆ. ಶಿವಮೊಗ್ಗ ನಗರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ.

Nanjappa Hospital Shimoga

ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಫೆ.8ರ ಮಧ್ಯಾಹ್ನದಿಂದ ಫೆ.9ರ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಿ ತಹಶೀಲ್ದಾರ್ ಡಾ.ನಾಗರಾಜ್ ಅವರು ಆದೇಶ ಹೊರಡಿಸಿದ್ದರು. ಕಳೆದ ರಾತ್ರಿಗೆ ನಿಷೇಧಾಜ್ಞೆ ಅವಧಿ ಮುಗಿದಿದೆ.

ಸಹಜ ಸ್ಥಿತಿಗೆ ಶಿವಮೊಗ್ಗ

ಪ್ರತಿಭಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಫೆ.8ರಂದು ಶಿವಮೊಗ್ಗ ನಗರದಲ್ಲಿ ಅಂಗಡಿಗಳನ್ನ ಬಂದ್ ಮಾಡಿಸಲಾಗಿತ್ತು. ಜನ ಸಂಚಾರವು ಕಡಿಮೆಯಾಗಿತ್ತು. ವಿವಿಧೆಡೆ ಪೊಲೀಸರು ತಪಾಸಣೆ ಕೈಗೊಂಡಿದ್ದರು. ಬುಧವಾರ ಶಿವಮೊಗ್ಗ ನಗರ ಬಹುತೇಕ ಸಹಜ ಸ್ಥಿತಿಗೆ ಮರಳಿತ್ತು. ನಿಷೇಧಾಜ್ಞೆ ಇದ್ದಿದ್ದರಿಂದ ಗುಂಪು ಸೇರುವಂತಿರಲಿಲ್ಲ. ನಿಷೇಧಾಜ್ಞೆ ಅವಧಿ ಮುಗಿದಿರುವುದರಿಂದ ಇವತ್ತು ನಗರ ಸಹಜ ಸ್ಥಿತಿಗೆ ಬರಲಿದೆ.

Kalleshwara-Enterprises.webp

ಪೊಲೀಸರಿಂದ ರೂಟ್ ಮಾರ್ಚ್

ಮತ್ತೊಂದೆಡೆ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಶಿವಮೊಗ್ಗ ಪೊಲೀಸರಿಂದ ರೂಟ್ ಮಾರ್ಚ್ ನಡೆಸಲಾಯಿತು. ಬುಧವಾರ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.

ಶಾಲೆ, ಕಾಲೇಜು ರಜೆಯಿಂದ ವಾತಾವರಣ ತಿಳಿ

ಸಂಘರ್ಷದಿಂದಾಗಿ ಶಾಲೆ, ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ಶುಕ್ರವಾರದವರೆಗೆ ರಜೆ ಇದೆ. ಹಾಗಾಗಿ ವಾತಾವರಣ ತಿಳಿಯಾಗಿದೆ. ಶನಿವಾರದಿಂದ ಪುನಃ ತರಗತಿಗಳು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ | ಹಿಜಾಬ್, ಕೇಸರಿ ಶಾಲು ವಿವಾದ, ಮಂಗಳವಾರ ಜಿಲ್ಲೆಯ ಯಾವ್ಯಾವ ಕಾಲೇಜಿನಲ್ಲಿ ಏನೇನಾಯ್ತು?

Shimoga Live News Reach to Different Countries

Shimoga District ProfileAbout Shivamogga Live | Shimoga Live News Whatsapp 7411700200

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment